ರಾಜ್ಯದಲ್ಲಿ ʼನಾರ್ಮಲ್‌ ಜೀವನʼ ದುಬಾರಿಯಾಯ್ತು; ಇಂದಿನಿಂದ ಕ್ಯಾಬ್‌, ಟ್ಯಾಕ್ಸಿ ರೇಟ್‌ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬದುಕುವುದಕ್ಕೆ ಬೇಕಾದ ನಾರ್ಮಲ್‌ ವಿಷಯಗಳಿಗೆ ಹೆಚ್ಚೆಚ್ಚು ಹಣ ಸುರಿಯುವಂತಾಗಿದೆ. ಹಾಲು, ಮೊಸರು, ಕಾಫಿ,ಟೀ, ಕರೆಂಟ್‌, ಕಸ, ನೀರು ಎಲ್ಲವೂ ಹೆಚ್ಚಾಗಿದೆ. ಇದರ ಮಧ್ಯೆ ಕ್ಯಾಬ್‌ ಹಾಗೂ ಟ್ಯಾಕ್ಸಿ ರೇಟ್‌ ಕೂಡ ಇಂದಿನಿಂದ ಜಾಸ್ತಿಯಾಗಲಿದೆ.

ಉಕ್ಕು ಮತ್ತು ಆಟೋ ಮೊಬೈಲ್ ದರ ಹೆಚ್ಚಳದ ಹಿನ್ನೆಲೆ ಕಾರು ತಯಾರಿಕಾ ಕಂಪನಿಗಳ ದರ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ಡಿಸೇಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಇದರ ಎಫೆಕ್ಟ್ ಇದೀಗ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್, ಕ್ಯಾಬ್​ಗಳ ಮೇಲೆ ಬಿದ್ದಿದ್ದು, ಇಂದಿನಿಂದಲೇ ಪ್ರತಿ ಕಿಮೀ ಮೇಲೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗುತ್ತಿದೆ.

2025ನೇ ವರ್ಷವನ್ನು ದರ ಏರಿಕೆಯ ವರ್ಷ ಅಂದರೆ ತಪ್ಪಾಗಲ್ಲ. ಅದರಲ್ಲೂ ದುಬಾರಿ ದುನಿಯಾನೇ ಓಪನ್ ಆದ ತಿಂಗಳು ಅಂದರೆ ಏಪ್ರಿಲ್ ಎನ್ನಬಹುದು. ಈ ತಿಂಗಳಲ್ಲಿ ಸಾರಿಗೆಗೆ ಸಂಬಂಧಿಸಿದಂತೆ ಟೋಲ್, ಕಾರು ಕಂಪನಿಗಳ ದರ ಏರಿಕೆ, ರಾಜ್ಯ ಸಾರಿಗೆ ಇಲಾಖೆಯ ಕಾರಿನ ಮೇಲೆ ಟ್ಯಾಕ್ಸ್ ಹೆಚ್ಚಳ ಪ್ರಮುಖವಾಗಿ ಡಿಸೇಲ್ ಮೇಲೆ ಮಾರಾಟ ತೆರಿಗೆ ಹೆಚ್ವಳ, ನಾಲ್ಕು ನಾಲ್ಕು ಬೆಲೆ ಏರಿಕೆಯಿಂದ ಕಂಗಲಾಗಿರುವ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ಅಸೋಸಿಯೇಷನ್, ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್​ಗಳು ಪ್ರತಿ ಕಿಮೀಗೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗಿದೆ ಇಲ್ಲಾಂದ್ರೆ ನಾವು ಉದ್ಯಮ ನಡೆಸೋದು ಕಷ್ಟ ಆಗುತ್ತದೆ ಅಂತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!