ಬೆಂಗಳೂರಿನಲ್ಲಿ ʼಮಾಮೂಲಿʼ ಮಳೆ : ಯಲಹಂಕದಲ್ಲಿ ಏಳು ಕಾರುಗಳು ಡಿಕ್ಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಲೇ ಇದ್ದು,ಇದು ಮಾಮೂಲಿ ಎನ್ನುವಂತೆ ಆಗಿದೆ. ಇಂದು ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, ಯಲಹಂಕದಲ್ಲಿ ಏಳು ಕಾರುಗಳು ಡಿಕ್ಕಿಯಾಗಿವೆ.

ಯಲಹಂಕಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ 7 ಕಾರುಗಳು ಡಿಕ್ಕಿ ಹೊಡೆದಿವೆ. ಸದ್ಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಸರಣಿ ಅಪಘಾತ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಫ್ಲೈ ಓವರ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ನಿಧಾನಗತಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಕೆಲಸಕ್ಕೆ ಹೋಗುವ ಇತರರಿಗೆ ಟ್ರಾಫಿಕ್‌ ಜಾಮ್‌ನಿಂದ ನಿಂತಲ್ಲೇ ನಿಂತು ಸುಸ್ತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!