ಹೊಸದಿಗಂತ ವರದಿ, ಕಲಬುರಗಿ:
ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಮತದಾನ ಮುಕ್ತಾಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು,ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸೇರಿದಂತೆ ಒಟ್ಟು ಅಂದಾಜು ೬೯.೫೧ರಷ್ಟು ಮತದಾನವಾಗಿದೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಕೃಷ್ಣ ವಾಜಪೇಯಿ ತಿಳಿಸಿದರು.
ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ ಮತದಾರರು, ಮಳೆಯನ್ನು ಲೆಕ್ಕಿಸದೆ ತಮ್ಮ ಅಧಿಕಾರವನ್ನು ಚಲಾವಣೆ ಮಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಕಲಬುರಗಿ -೬೬.೯೦, ಬೀದರ್ -೬೯.೭೪, ರಾಯಚೂರು -೭೧.೨೮, ಬಳ್ಳಾರಿ -೬೬.೮೬, ಯಾದಗಿರಿ -೬೧.೩೮, ಕೊಪ್ಪಳ -೮೧.೬೧, ವಿಜಯನಗರ – ೭೨,೭೬ ಪ್ರತಿಶತ ಅಂದಾಜು ಮತದಾನವಾಗಿದ್ದು,ಒಟ್ಟು ೬೯.೫೧ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.