ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಆಗಸದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ಇದೀಗ ನೀರೊಳಗೆ ದಾಳಿ ನಡೆಸಬಲ್ಲಿ ಪರಮಾಣು ಡ್ರೋನ್‌ನ್ನು ಪರೀಕ್ಷಿಸಿದೆ.
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾರ್ಗದರ್ಶನದಲ್ಲಿ ಪರಮಾಣು ಪರೀಕ್ಷೆ ಪೂರ್ಣಗೊಂಡಿದೆ. ಡ್ರೋನ್ ಪರೀಕ್ಷೆಗೆ ಸುಮಾರು 59 ಗಂಟೆಗಳ ಸಮಯ ಬೇಕಿದ್ದು, ಅಷ್ಟೂ ಸಮಯ ಡ್ರೋನ್ ನೀರಿನೊಳಗೇ ಇತ್ತು. ಇಂದು ಪೂರ್ವ ಕರಾವಳಿಯಲ್ಲಿ ಡ್ರೋನ್ ಸ್ಫೋಟಗೊಂಡಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.
ನೀರಿನಲ್ಲಿ ಶತ್ರುಗಳ ಮೇಲೆ ಗುಟ್ಟಾಗಿ ದಾಳಿ ನಡೆಸಲು ಹಾಗೂ ನೌಕಾಪಡೆಯ ಸ್ಟ್ರೈಕರ್ ಗುಂಪುಗಳು ಮತ್ತು ಪ್ರಮುಖ ಕಾರ್ಯಾಚರಣೆಯ ಬಂದರುಗಳನ್ನು ನಾಶಪಡಿಸುವುದು ಡ್ರೋನ್ ವ್ಯವಸ್ಥೆಯ ಉದ್ದೇಶವಾಗಿದೆ ಎನ್ನಲಾಗಿದೆ.