March 23, 2026
Monday, March 23, 2026
spot_img

ಇರೋ ಒಂದು ಕೆಲ್ಸನೂ ಸರಿಯಾಗಿ ಮಾಡೋಕಾಗಲ್ಲ: ತಪಾಸಣೆ ಇಲ್ಲದೇ ಎಫ್‌ಸಿ ಕೊಟ್ಟ ಆರ್‌ಟಿಒ ವಿರುದ್ಧ ಎಫ್‌ಐಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಪಾಸಣೆ ನಡೆಸದೇ 10,210ಕ್ಕೂ ಅಧಿಕ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ನೀಡಿದ ಆರೋಪದ ಮೇಲೆ ನಿವೃತ್ತ ಮೋಟಾರ್ ವಾಹನ ನಿರೀಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಫೆಬ್ರವರಿ 28ರಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಕೀಲರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸಾರಿಗೆ ಇಲಾಖೆ ತನಿಖೆ ಆರಂಭಿಸಿತ್ತು. ವಾಹನ್ ಪೋರ್ಟಲ್‌ನ ದಾಖಲೆಗಳ ಪರಿಶೀಲನೆಯಲ್ಲಿ ಗುಜರಾತ್, ಮಹಾರಾಷ್ಟ್ರ ಹಾಗೂ ಕೇರಳ ಮೂಲದ ವಾಹನಗಳಿಗೂ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಗುಜರಾತ್‌ನಲ್ಲಿ ನೋಂದಾಯಿತ 41 ವಾಹನಗಳಿಗೆ ಇಮೇಲ್ ಮೂಲಕ ಎಫ್‌ಸಿ ನೀಡಿದ ವಿಷಯ ಹೊರಬಂದ ಬಳಿಕ ಅವರನ್ನು ಜನವರಿ 20ರಂದು ಅಮಾನತು ಮಾಡಲಾಗಿತ್ತು. ಅವರು ಜನವರಿ 31ರಂದು ನಿವೃತ್ತರಾದರು.

ಇದನ್ನೂ ಓದಿ:

ಫೆಬ್ರವರಿ 27ರ ವಿಚಾರಣಾ ವರದಿ ಆಧರಿಸಿ ಸಾರಿಗೆ ಆಯುಕ್ತರು ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದು, ಪೊಲೀಸರು ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !