ಉಪರಾಷ್ಟ್ರಪತಿ ರಾಜೀನಾಮೆ ವಿಚಾರ ಗೊತ್ತಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಹೊಸ ದಿಗಂತ ವರದಿ,ವಿಜಯಪುರ:

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಬಗ್ಗೆ ಗೊತ್ತಿಲ್ಲ, ಸಂಪೂರ್ಣ ವಿವರ ಅವರಿಗೇ ಗೊತ್ತು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಏಕೆಂದರೆ ಅವರು ಯಾವಾಗಲು ಸರ್ಕಾರದ ಪರವಾಗಿ ಇರ್ತಾ ಇದ್ದರು. ರಾಜೀನಾಮೆ ಕೊಟ್ಟಿರುವುದು ಏತಕ್ಕೆ ಅನ್ನೊದನ್ನ ಅವರೆ ಹೇಳಬೇಕು ಎಂದರು.

ನಮಗೆ ರೈತರ ಸಮಸ್ಯೆಗಾಳಾಗಲಿ, ಬಡವರ ಸಮಸ್ಯೆಗಳಾಗಲಿ, ಅಂತಾರಾಷ್ಟ್ರೀಯ ಸಮಸ್ಯೆಗಳು ಬಗ್ಗೆ ಮಾತನಾಡಲು ನಮಗೆ ಅವರು ಅವಕಾಶ ಕೊಡ್ತಿರಲಿಲ್ಲ. ಬಡವರ ಸಮಸ್ಯೆಗಳ ಬಗ್ಗೆ ಎತ್ತಿದಾಗ, ಹಿಂದೂ ಮುಸ್ಲಿಂ ಗಲಾಟೆ ಬಗ್ಗೆ ಮಾತನಾಡಿದರೂ ಅವರ ನಮಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದರು.

ಈಗ ಅವರು ಹೇಳ್ತಿದ್ದಾರೆ ಅಂದರೆ ಅದು ಅವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಏನಾಗಿದೆ ಅನ್ನೊದು ನಮಗೇನು ಅದರ ಬಗ್ಗೆ ಗೊತ್ತಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಈಗ ಹೇಳಲ್ಲ ನಂತರ ಹೇಳುವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!