ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಏಳಿಗೆಯ ಬಗ್ಗೆ ಎಷ್ಟು ಸುದ್ದಿಯಾಗುತ್ತದೆಯೋ, ಟ್ರೋಲ್‌ಗಳಿಂದಲೂ ಅಷ್ಟೇ ಸುದ್ದಿಯಾಗುತ್ತಾರೆ. ಈ ಬಗ್ಗೆ ರಶ್ಮಿಕಾ ಮಾತನಾಡಿದ್ದು, ಸೆಲೆಬ್ರಿಟಿ ಎಂದಮೇಲೆ ಸೋಲು ಗೆಲುವು ಹೇಗೆ ಸಾಮಾನ್ಯವೋ, ಟ್ರೋಲ್ಸ್ ಕೂಡ ಅಷ್ಟೇ ಸಾಮಾನ್ಯ. ಎಲ್ಲರೂ ನನ್ನನ್ನು ಇಷ್ಟಪಡಬೇಕು ಎಂದೇನಿಲ್ಲ ಎಂದು ಹೇಳಿದ್ದಾರೆ.
ನಾವು ಕಲಾವಿದರು, ನಾನು ಕಲಾವಿದೆಯಾಗುವ ಮುನ್ನ ಎಲ್ಲ ಹೀರೋ, ಹೀರೋಯಿನ್‌ಗಳನ್ನು ಇಷ್ಟಪಡುತ್ತಿರಲಿಲ್ಲ. ಹಾಗೆ ಕೆಲವರಿಗೆ ಕೆಲವು ಇಷ್ಟವಾಗದೇ ಇರಬಹುದು. ಎಲ್ಲದಕ್ಕೂ ಉತ್ತರ ಇಲ್ಲ. ನಾನು ಹೆಚ್ಚು ಎಕ್ಸ್ಪ್ರೆಸೀವ್ ಇದು ಕೆಲವರಿಗೆ ಇಷ್ಟ ಇಲ್ಲ. ಆದರೆ ಇದಕ್ಕೇ ನನ್ನನ್ನು ಇಷ್ಟಪಡೋರೂ ಇದ್ದಾರೆ ಎಂದು ಹೇಳಿದ್ದಾರೆ.