ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನ ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್ ಸೋಪ್ಗೆ ಪ್ಯಾನ್ ಇಂಡಿಯಾ ನಟಿ ತಮನ್ನಾ ಭಾಟಿಯಾರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಲಾಗಿದೆ.
ಇದು ಕನ್ನಡಿಗರನ್ನು ಕೆರಳಿಸಿದೆ. ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಎಷ್ಟೋ ಕನ್ನಡಿಗರು ಇದ್ದಾರೆ. ಆದರೆ ಪ್ಯಾನ್ ಇಂಡಿಯಾ ನಟಿ ಎನ್ನುವ ಕಾರಣಕ್ಕೆ ತಮನ್ನಾ ಭಾಟಿಯಾರನ್ನು ಆಯ್ಕೆ ಮಾಡಿರುವುದು ಎಷ್ಟೋ ಜನಕ್ಕೆ ಅಸಮಾಧಾನ ತರಿಸಿದೆ.
ಇದಕ್ಕೆ ಮೈಸೂರು ರಾಜರೇ ಅಂಬಾಸಿಡರ್ ಆಗಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಆದರೆ ಸಂಸದ ಯದುವೀರ್ ಒಡೆಯರ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ನನಗೆ ರಾಯಭಾರಿ ಆಗೋಕೆ ಆಸಕ್ತಿ ಇಲ್ಲ. ಆದರೆ ಕನ್ನಡಿಗರನ್ನು ನೇಮಕ ಮಾಡೋದು ಬೆಸ್ಟ್ ನಿರ್ಧಾರ ಎಂದಿದ್ದಾರೆ.