Tuesday, December 23, 2025

CINE | ‘ಜೈಲರ್ 2’ನಲ್ಲಿ ಗೆಸ್ಟ್ ರೋಲ್ ಅಲ್ವೇ ಅಲ್ಲ..! ಹಾಗಿದ್ರೆ ಶಿವಣ್ಣನಿಗೆ ಸಿಕ್ಕಿರೋ ಪಾತ್ರನಾದ್ರೂ ಯಾವ್ದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ತೆರೆಕಂಡ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ವಾಣಿಜ್ಯ ಅಂಶಗಳ ಜೊತೆಗೆ ವಿಭಿನ್ನ ಅತಿಥಿ ಪಾತ್ರಗಳ ಮೂಲಕವೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ವಿಶೇಷವಾಗಿ ನಟ ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ದೊರೆತ ಪ್ರತಿಕ್ರಿಯೆ ತಮಿಳುನಾಡಿನಲ್ಲಿ ಅವರಿಗೆ ಹೊಸ ಅಭಿಮಾನಿ ವರ್ಗವನ್ನು ನಿರ್ಮಿಸಿತ್ತು.

ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣ ಹಂತದಲ್ಲಿದ್ದು, ಈ ಭಾಗದಲ್ಲೂ ತಾವು ನಟಿಸುತ್ತಿರುವುದಾಗಿ ಶಿವರಾಜ್ ಕುಮಾರ್ ಸ್ವತಃ ದೃಢಪಡಿಸಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ‘45’ ಸಿನಿಮಾ ಬಿಡುಗಡೆ ಹಿನ್ನೆಲೆ ನೀಡಿದ ಸಂದರ್ಶನದಲ್ಲಿ ಅವರು ‘ಜೈಲರ್ 2’ ಕುರಿತು ಮಾತನಾಡಿದ್ದಾರೆ. ಮೊದಲ ಭಾಗದ ಕಥೆ ಯಾವ ಹಂತದಲ್ಲಿ ಮುಕ್ತಾಯವಾಯಿತೋ, ಅದೇ ಮುಂದುವರಿಕೆಯಾಗಿ ಎರಡನೇ ಭಾಗ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ತಮ್ಮ ಪಾತ್ರ ಈ ಬಾರಿ ಕೇವಲ ಅತಿಥಿ ಪಾತ್ರವಾಗಿರುವುದಿಲ್ಲ, ಹಿಂದಿನ ಭಾಗಕ್ಕಿಂತ ಹೆಚ್ಚು ಮಹತ್ವ ಹೊಂದಿರಲಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಒಂದು ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಜನವರಿಯಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಎಂದು ಶಿವಣ್ಣ ತಿಳಿಸಿದ್ದಾರೆ. ‘ಜೈಲರ್’ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ತಲುಪಿದ ಯೂನಿವರ್ಸಲ್ ಕಂಟೆಂಟ್ ಹೊಂದಿತ್ತು. ನಿರ್ದೇಶಕ ನೆಲ್ಸನ್ ರಜನಿಕಾಂತ್ ಅವರನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು ಎಂದು ಅವರು ಪ್ರಶಂಸಿಸಿದ್ದಾರೆ.

‘ಜೈಲರ್’ನಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮೋಹನ್‌ಲಾಲ್, ಜಾಕಿ ಶ್ರಾಫ್ ಸೇರಿದಂತೆ ಹಲವು ಸ್ಟಾರ್‌ಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಎರಡನೇ ಭಾಗದಲ್ಲಿ ಇನ್ನಷ್ಟು ಹೊಸ ಮುಖಗಳು ಸೇರ್ಪಡೆಯಾಗಲಿವೆ ಎಂಬ ನಿರೀಕ್ಷೆ ಮೂಡಿದೆ.

error: Content is protected !!