ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಆಟೋ ಸೇವೆ ನೀಡಿ ಜನರ ಮನೆ ಮಾತಾಗಿದ್ದ ನಮ್ಮ ಯಾತ್ರಿ ಸಂಸ್ಥೆ ಇದೀಗ ಕ್ಯಾಬ್ ಸೇವೆ ನೀಡಲು ಮುಂದಾಗಿದೆ.
ನಮ್ಮ ಯಾತ್ರಿ ಆ್ಯಪ್ ಆರಂಭದಲ್ಲಿ ಬೆಂಗಳೂರಿನಾದ್ಯಂತ ಆಟೊ ಸೇವೆಗಳನ್ನು ಒದದಗಿಸುತ್ತಿತ್ತು. ಇದೀಗ ಕ್ಯಾಬ್ ಸೇವಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಪ್ರಯಾಣಿಕರು ನಮ್ಮ ಯಾತ್ರಿ ಆ್ಯಪ್ ಮೂಲಕ ಕ್ಯಾಬ್ ಕೂಡ ಬುಕ್ ಮಾಡಬಹುದಾಗಿದೆ. ಸದ್ಯದಲ್ಲೇ ಈ ಸೇವೆ ಕರ್ನಾಟಕದಾದ್ಯಂತ ವಿಸ್ತರಣೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.
ಸದ್ಯ 25,000 ಕ್ಯಾಬ್ಗಳೊಂದಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಒಂದು ಲಕ್ಷ ಚಾಲಕರನ್ನು ಸೇರಿಸುವ ಗುರಿಯನ್ನು ಆ್ಯಪ್ ಹೊಂದಿದೆ.
Bengaluru, the wait is over 🥁
Namma Cabs are now live in your city, on the #NammaYatri app 🚕Hop in, let’s make every ride memorable! 🙌🏻 pic.twitter.com/jKn9Q45KaO
— Namma Yatri (@nammayatri) April 16, 2024