August 24, 2026
Monday, August 24, 2026
spot_img

📊 | ಬರಿ ಮಾತಲ್ಲ, ಇದು ಸುಧಾರಣೆಯ ಹಾದಿ: 7.2% ಜಿಡಿಪಿ ಬೆಳವಣಿಗೆಯ ಗುಟ್ಟು ಬಿಚ್ಚಿಟ್ಟ ಸೀತಾರಾಮನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಜೆಟ್ ಭಾಷಣದ ಆರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ದೃಢವಾದ ಆರ್ಥಿಕ ನೀತಿಗಳನ್ನು ಶ್ಲಾಘಿಸಿದರು. “ನಮ್ಮ ಸರ್ಕಾರ ಕೇವಲ ಬಾಯಿಮಾತಿನ ಭರವಸೆಗಳಿಗೆ ಸೀಮಿತವಾಗದೆ, ನೈಜ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಗಮನಹರಿಸಿದೆ,” ಎಂದು ಅವರು ತಿಳಿಸಿದರು.

ವಿಶ್ವದಾದ್ಯಂತ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಮತ್ತು ಅಸ್ಥಿರತೆ ಇದ್ದಾಗ್ಯೂ, ಭಾರತವು 7.2% ಜಿಡಿಪಿ ಪ್ರಗತಿ ದರವನ್ನು ಸಾಧಿಸಲು ಈ ಸುಧಾರಣಾ ಕ್ರಮಗಳೇ ಪ್ರಮುಖ ಕಾರಣ ಎಂದು ಅವರು ಪ್ರತಿಪಾದಿಸಿದರು. ಕಠಿಣ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯು ಸ್ಥಿರವಾಗಿ ಮುನ್ನಡೆಯುತ್ತಿರುವುದು ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿ ಎಂದು ಅವರು ಬಣ್ಣಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !