BIG BOSS | ಪ್ರೀತಿಯಲ್ಲ, ದ್ವೇಷ! ತನಿಷಾ ಮೇಲೆ ಕೆಂಡವಾದ ವರ್ತೂರ್, ಇದಕ್ಕೆಲ್ಲಾ ಕಾರಣ ಸ್ನೇಹಿತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್‌ನಲ್ಲಿ ಜೋಡಿಹಕ್ಕಿಗಳಂತೆ ಕಾಣಿಸಿಕೊಂಡಿದ್ದ ತನಿಷಾ ಹಾಗೂ ವರ್ತೂರು ಸಂತೋಷ್ ಇದೀಗ ಕಿತ್ತಾಡಿಕೊಂಡು ದೂರ ಆಗಿದ್ದಾರೆ.
ಇದೆಲ್ಲದರ ಸೂತ್ರದಾರ ಸ್ನೇಹಿತ್! ಹೌದು, ಕ್ಯಾಪ್ಟನ್ಸಿ ಟಾಸ್ಕ್ ಗೆದ್ದ ಸ್ನೇಹಿತ್‌ಗೆ ಬಿಗ್‌ಬಾಸ್ ನಾಮಿನೇಷನ್ ಪವರ್‌ನ್ನು ನೀಡಿದ್ದಾರೆ.

ಇದರ ಅನ್ವಯ ಮನೆಯಲ್ಲಿ ಯಾಕೆ ಉಳೀಬೇಕು ಅನ್ನೋ ಬಗ್ಗೆ ವಾದ ಮಾಡುವ ಟಾಸ್ಕ್ ನೀಡಲಾಗಿದೆ. ಇದರಲ್ಲಿ ತನಿಷಾಗೆ ಕಾಲು ಪೆಟ್ಟಾಗಿದೆ. ಅವರಿಗೆ ಇರೋಕೆ ಅವಕಾಶ ಕೊಡಿ ಎಂದು ಕಾರ್ತಿಕ್ ಸ್ನೇಹಿತ್‌ರನ್ನು ಕೇಳಿದ್ದಾರೆ. ಪಕ್ಕದಲ್ಲೇ ಇದ್ದ ವರ್ತೂರು ಯಾರೂ ದಾನಿಗಳಾಗೋದು ಬೇಡ, ಅದಕ್ಕೆ ಈ ಮನೆಗೆ ಬಂದಿಲ್ಲ. ಅವರವರ ಆಟ ಅವರು ಆಡಿ ಎಂದು ಹೇಳಿದ್ದಾರೆ.

ಇದಕ್ಕೆ ತನಿಷಾ ಕೆಂಡವಾಗಿದ್ದು, ಇಷ್ಟು ಸಮಯ ಇಲ್ಲದ ಹೊಸ ವಿಷಯಗಳನ್ನು ವರ್ತೂರು ಮಾತನಾಡ್ತಿದ್ದಾರೆ ಅವರ ಮಾತನ್ನು ಒಪ್ಪೋದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ತನಿಷಾ ಹಾಗೂ ಸಂತೋಷ್ ಮಧ್ಯೆ ದೊಡ್ಡ ಬಿರುಕು ಬಿದ್ದಿರೋದಂತೂ ಗ್ಯಾರೆಂಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!