ಬಂಗಾಳದಲ್ಲಿ ಸಿಎಎ ಮಾತ್ರವಲ್ಲ, ಎನ್​ಆರ್​ಸಿಯನ್ನೂ ಜಾರಿ ಮಾಡಲು ಬಿಡಲ್ಲ: ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಾಗ್ದಾಳಿ ನಡೆಸಿದ್ದಾರೆ.

ಕೃಷ್ಣಾನಗರ ಲೋಕಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಮಮತಾ ಬ್ಯಾನರ್ಜಿ, ಸಿಎಎ ಅನ್ನು ಒಪ್ಪಬಾರದು ಎಂದು ಮತುವಾ ಸಮುದಾಯದ (Matua community) ಜನರಿಗೆ ಕರೆ ನೀಡಿದ್ದಾರೆ.

ಮತುವಾ ಎಂಬುದು ಹಿಂದು ಧರ್ಮದ ದಲಿತರು ಸೇರಿ ಆಗಿರುವ ಒಂದು ಮತವಾಗಿದ್ದು, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಮುದಾಯದವರು ಇದ್ದಾರೆ. ಭಾರತದ ವಿಭಜನೆ ಬಳಿಕ ಹಲವರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ಹಾಗೆಯೇ, ಧಾರ್ಮಿಕ ದೌರ್ಜನ್ಯಕ್ಕೊಳಗಾಗಿಯೂ ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದವರಿದ್ದಾರೆ.

ಇವರನ್ನು ಉದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಮತುವನ್ನರೇ ನನ್ನ ಮೇಲೆ ನಂಬಿಕೆ ಇಡಿ. ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ. ಕೇಂದ್ರ ಸರ್ಕಾರದ ಸುಳ್ಳು ಭರವಸೆಗಳಿಗೆ ಮಾರುಹೋಗಬೇಡಿ. ನೀವು ಪೌರತ್ವಕ್ಕೆ ಅರ್ಜಿ ಸಲ್ಲಿಸಿದರೆ ನಿಮ್ಮನ್ನು ಐದು ವರ್ಷ ವಿದೇಶಿಗ ಎಂದು ಪರಿಗಣಿಸುತ್ತಾರೆ. ನಿಮ್ಮಿಂದ ಎಲ್ಲವನ್ನೂ ಕಿತ್ತುಕೊಂಡು ಡಿಟೆಂಶನ್ ಕ್ಯಾಂಪ್​ನಲ್ಲಿ ಇರಿಸುತ್ತಾರೆ. ನಿಮಗೆ ಅದು ಬೇಕಾ? ಅಥವಾ ಶಾಂತಿಯಿಂದ ಬದುಕುವುದು ಬೇಕಾ?’ ಎಂದು ಕೇಳಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಸಿಎಎ ಮಾತ್ರವಲ್ಲ, ಎನ್​ಆರ್​ಸಿಯನ್ನೂ ಜಾರಿ ಮಾಡಲು ಬಿಡುವುದಿಲ್ಲ’ ಎಂದು ತಮ್ಮ ಶಪಥವನ್ನು ದೀದಿ ಪುನರುಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!