ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟರ್ ಶುಭ್‌ಮನ್ ಗಿಲ್ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸದ್ದು ಮಾಡ್ತಿದ್ದಾರೆ. ಈ ಹಿಂದೆ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್‌ನಲ್ಲಿದ್ದರು ಎಂದು ಹೇಳಲಾಗಿತ್ತು. ಆದರೆ ಸಾರಾ ಅಲಿ ಖಾನ್ ಅಲ್ಲ, ಸಾರಾ ತೆಂಡೂಲ್ಕರ್ ಎಂದು ಗಾಸಿಪ್ ಆಗಿತ್ತು.
ಆದರೆ ಇದೀಗ ಸಾರಾ ಹಾಗೂ ಶುಭ್‌ಮನ್ ನಡುವೆ ಬ್ರೇಕಪ್ ಆಗಿದ್ದು, ಅವರು ಬಾಲಿವುಡ್‌ನ ಕಿರುತೆರೆ ನಟಿಯ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ನಟಿ ರಿಧಿಮಾ ಪಂಡಿತ್ ಕಿರುತೆರಯಲ್ಲಿ ಎಲ್ಲರಿಗೂ ಪರಿಚಿತವಾದವರು, ನಟಿಯ ಜೊತೆ ಈ ವರ್ಷದ ಡಿಸೆಂಬರ್‌ನಲ್ಲಿ ಮದುವೆ ಎಂದು ಹೇಳಲಾಗಿತ್ತು.
ಆದರೆ ರಿಧಿಮಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನಗೂ ಬೆಳಗ್ಗೆಯಿಂದ ಕರೆಗಳು ಬರುತ್ತಿವೆ, ಇದನ್ನು ಯಾರು ಹರಡಿದ್ರೋ ಗೊತ್ತಿಲ್ಲ. ನನ್ನ ಮದುವೆ ವಿಷಯವನ್ನು ನಾನೇ ಹೇಳ್ತಿನಿ ಈ ರೀತಿ ಗಾಸಿಪ್ ಆಗೋದಕ್ಕೆ ಬಿಡೋದಿಲ್ಲ ಎಂದು ರಿಧಿಮಾ ಹೇಳಿದ್ದಾರೆ.