ಹೊಸದಿಗಂತ ವರದಿ ತುಮಕೂರು:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಕ್ಷೇತ್ರ ಬದಲಾವಣೆಯ ಬಗ್ಗೆ ಚಿಂತಿಸಿಲ್ಲ, ಉಡುಪಿ-ಚಿಕ್ಕಮಂಗಳೂರು ಕ್ಷೇತ್ರ ದಿಂದಲೇ ಸ್ಪರ್ಧಿಸುವುದಾಗಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರು ಸ್ಪಷ್ಟಪಡಿಸಿದ್ದಾರೆ.
ತಮಗೆ ತುಮಕೂರಿನಿಂದ ಸ್ಪರ್ಧಿಸುವ ಉದ್ದೇಶವಲ್ಲ ಎಂದರು. ಇಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಾವು ಇಂದು ತುಮಕೂರಿನ ಭೇಟಿ ನೀಡಿರುವುದು ನೆಫೆಡ್ ಕೇಂದ್ರ ಉದ್ಘಾಟನೆಗೆ ಮಾತ್ರ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.