ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ ಹೌರಾ ಕಡೆಗೆ ಚಲಿಸುವ ಕೆಲ ರೈಲುಗಳನ್ನು ರದ್ದುಗೊಳಿಸಿದೆ.
ಇದರ ಜೊತೆಗೆ ಇನ್ನೂ ಕೆಲವು ಕಡೆ ಕಾಮಗಾರಿ ನಡೆಯುತ್ತಿರುವ ಕಾರಣ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಅಂದರೆ ಜೂನ್ 11 ರಿಂದ ಜೂನ್ 14 ರವರೆಗೆ ಒಟ್ಟು 15 ರೈಲುಗಳನ್ನು ರದ್ದುಗೊಳಿಸಲಾಗಿದೆ.
ದಕ್ಷಿಣ ಮಧ್ಯ ರೈಲ್ವೆ ಈ ವಿಷಯವನ್ನು ಬಹಿರಂಗಪಡಿಸಿದೆ. ಚೆನ್ನೈ ಸೆಂಟ್ರಲ್ – ಶಾಲಿಮಾರ್ (12842) ರೈಲು ಸೇವೆಗಳನ್ನು ಈ ತಿಂಗಳ 12 ರಂದು ಮರುಸ್ಥಾಪಿಸಲಾಗುತ್ತಿದೆ ಎಂದೂ ಮಾಹಿತಿ ನೀಡಿದೆ.
ರದ್ದಾದ ರೈಲುಗಳ ಪಟ್ಟಿ
ಜೂನ್ 11 ರಂದು ಮೈಸೂರು – ಹೌರಾ (22818).
ಜೂನ್ 12 ರಂದು ಹೈದರಾಬಾದ್ – ಶಾಲಿಮಾರ್ (18046); ಎರ್ನಾಕುಲಂ – ಹೌರಾ (22878), ಸಂತ್ರಗಚಿ – ತಾಂಬ್ರಮ್ (22841), ಹೌರಾ – ಚೆನ್ನೈ ಸೆಂಟ್ರಲ್ (12839)
ಜೂನ್ 13 ರಂದು ಸಂತ್ರಗಚಿ – ಚೆನ್ನೈ ಸೆಂಟ್ರಲ್ (22807), ಹೌರಾ – ಎಎಂವಿಟಿ ಬೆಂಗಳೂರು (22887), ಶಾಲಿಮಾರ್ – ಚೆನ್ನೈ ಸೆಂಟ್ರಲ್ (22825), ಶಾಲಿಮಾರ್ – ಹೈದರಾಬಾದ್ (18045), ಸಿಕಂದರಾಬಾದ್ – ಶಾಲಿಮಾರ್ (12774), ಹೈದರಾಬಾದ್ – ಶಾಲಿಮಾರ್ (18046), ವಿಲ್ಲುಪುರಂ . (22604)
ಜೂನ್ 14 ರಂದು SMVT ಬೆಂಗಳೂರು – ಹೌರಾ (22864), ಭಾಗಲ್ಪುರ್- SMVT ಬೆಂಗಳೂರು (12254), ಶಾಲಿಮಾರ್-ಸಿಕಂದರಾಬಾದ್ (12773) ರೈಲುಗಳ ಸೇವೆಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ರೈಲ್ವೆ, ರೈಲುಗಳ ಓಡಾಟಕ್ಕೆ ಅಗತ್ಯವಾದ ವ್ಯವಸ್ಥೆಗಳಲ್ಲಿ ಎರಡು ಲಾಕ್‌ಗಳನ್ನು ಭದ್ರಪಡಿಸಲು ರೈಲ್ವೆ ಮಂಡಳಿ ಸೂಚನೆಗಳನ್ನು ನೀಡಿದೆ. ರೈಲು ನಿಯಂತ್ರಣ ವ್ಯವಸ್ಥೆ ಇರುವ ರಿಲೇ ಕೊಠಡಿಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಮತ್ತು ಪಾಯಿಂಟ್/ಟ್ರ್ಯಾಕ್ ಸರ್ಕ್ಯೂಟ್ ಸಿಗ್ನಲ್‌ಗಳಲ್ಲಿ ಸಿಗ್ನಲಿಂಗ್ – ಟೆಲಿಕಮ್ಯುನಿಕೇಶನ್ ಉಪಕರಣಗಳನ್ನು ಇರಿಸಲಾಗಿರುವ ‘ರಿಲೇ ಹಟ್‌ಗಳು’ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.