ಪ್ರಖ್ಯಾತ ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ಸ್ವದೇಶ್ ಚಟರ್ಜಿಗೆ ಉತ್ತರ ಕೆರೊಲಿನಾದಲ್ಲಿ ಅತ್ಯುನ್ನತ ರಾಜ್ಯ ಪ್ರಶಸ್ತಿ ಪ್ರದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಪ್ರಖ್ಯಾತ ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ಮತ್ತು ಕಾರ್ಯಕರ್ತ ಸ್ವದೇಶ್ ಚಟರ್ಜಿ ಅವರಿಗೆ ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಅತ್ಯುನ್ನತ ರಾಜ್ಯ ಪ್ರಶಸ್ತಿನೀಡಿ ಗೌರವಿಸಲಾಗಿದೆ. ಅವರು ಕಳೆದ ಮೂರು ದಶಕಗಳಲ್ಲಿ US-ಭಾರತದ ಸಂಬಂಧವನ್ನು ಬಲಪಡಿಸುವಲ್ಲಿ ಅಪಾರ ಕೊಡುಗೆ ನೀಡಿರುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಶುಕ್ರವಾರ ಕ್ಯಾರಿ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಕೆರೊಲಿನಾದ ಗವರ್ನರ್ ರೇ ಕೂಪರ್ ಅವರು ʼಆರ್ಡರ್ ಆಫ್ ದಿ ಲಾಂಗ್ ಲೀಫ್ ಪೈನ್ʼ ಪ್ರಶಸ್ತಿಯನ್ನು ಚಟರ್ಜಿ ಅವರಿಗೆ ನೀಡಿ ಗೌರವಿಸಿದ್ದಾರೆ. ಚಟರ್ಜಿಯವರು ಉತ್ತರ ಕೆರೊಲಿನಾದ ಅಭಿವೃದ್ಧಿಗೆ ಮಾತ್ರವಲ್ಲದೆ ಭಾರತ-ಯುಎಸ್ ಸಂಬಂಧಕ್ಕೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸಾಂಸ್ಕೃತಿಕ ಪರಿಸರವನ್ನು ಶ್ರೀಮಂತಗೊಳಿಸಲು ಅಪಾರ ಕೊಡುಗೆ ನೀಡಿದ್ದಾರೆ ಎಂದು ಗರ್ನರ್‌ ಕೂಪರ್‌ ಶ್ಲಾಘಿಸಿದ್ದಾರೆ.

2000ನೆಯ ಇಸವಿಯಿಂದಲೂ ಭಾರತ-ಯುಎಸ್‌ ಸಂಬಂಧವನ್ನು ಭದ್ರಪಡಿಸುವಲ್ಲಿ ಸ್ವದೇಶ್‌ ಚಟರ್ಜಿ ಪ್ರಮುಖಪಾತ್ರ ವಹಿಸಿದ್ದಾರೆ ಎಂದು ಹಲವರು ಬಣ್ಣಿಸಿದ್ದಾರೆ. ಚಟರ್ಜಿ ಅವರು ಯುಎಸ್-ಇಂಡಿಯಾ ನಾಗರಿಕ ಪರಮಾಣು ಒಪ್ಪಂದದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ, ಕಳೆದ ಎರಡು ದಶಕಗಳಲ್ಲಿ ಈ ಸಂಬಂಧಕ್ಕೆ ಉಭಯಪಕ್ಷೀಯ ಬೆಂಬಲದ ವಿಕಾಸದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಮರಿಕಾಗೆ ಭಾರತದ ಮಾಜಿ ರಾಯಭಾರಿ ರಿಚ್‌ ವರ್ಮಾ ಹೇಳಿದ್ದಾರೆ.

ಚಟರ್ಜಿಯವರ ಕುರಿತು ಮಾತನಾಡಿದ ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ರೋ ಖನ್ನಾ ” ಇಡೀ ದೇಶದಲ್ಲಿ ರಾಜಕೀಯವಾಗಿ ತೊಡಗಿಸಿಕೊಂಡ ಮೊದಲ ಭಾರತೀಯ ಅಮೆರಿಕನ್ನರಲ್ಲಿ ಚಟರ್ಜಿ ಒಬ್ಬರು. ಅವರು ಭಾರತೀಯ ಅಮೆರಿಕನ್ ಸಮುದಾಯಕ್ಕೆ ಶ್ರೇಷ್ಠ ನಾಯಕ. ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವೆ ಶೀತಲ ಸಮರದ ನಂತರದ ಸಂಬಂಧವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಹೇಳಿದ್ದಾರೆ.

ಭಾರತ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಚಟರ್ಜಿ ಅವರು ಅವಿರತ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಯುಎಸ್‌ನಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರತಿಯಾಗಿ ಭಾರತದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಮೂಡಿಸುವಲ್ಲಿ ಡಯಾಸ್ಪೊರಾ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಕ್ಕೆ ಅವರು ಉದಾಹರಣೆಯಾಗಿದ್ದಾರೆ ಎಂದು ಸಂಧು ಹೇಳಿದ್ದಾರೆ ಎಂದು ನ್ಯೂಸ್‌ 18 ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!