ಖ್ಯಾತ ಸಾಹಿತಿ ವಿಷ್ಣು ನಾಯ್ಕ ನಿಧನ

ಹೊಸದಿಗಂತ, ಅಂಕೋಲಾ :

ಖ್ಯಾತಸಾಹಿತಿ, ಪ್ರಕಾಶಕ, ನಿವೃತ್ತ ಶಿಕ್ಷಕ ವಿಷ್ಣು ನಾಯ್ಕ (79) ನಿಧನರಾಗಿದ್ದಾರೆ. ಅಂಬಾರ ಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು ಎಂ.ಎ ಪದವೀಧರರಾಗಿದ್ದು, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಿವೃತ್ತಿಯ ನಂತರದಲ್ಲಿ ಕೆನರಾ ವೆಲಫೆರ್ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಸಾಹಿತ್ಯಿಕವಾಗಿ ನಾಡಿನ ನಾಮಾಂಕಿತ ಸಾಹಿತಿಗಳಾಗಿ ತಮ್ಮ ರಾಘವೇಂದ್ರ ಪ್ರಕಾಶನದ ಮೂಲಕ ನೂರಾರು ಕೃತಿಗಳನ್ನು ರಚಿಸುವುದರ ಜೊತೆಗೆ ಹಲವು ಬರಹಗಾರರ ಕೃತಿಗಳನ್ನು ಪ್ರಕಟಿಸಿ ಉದಯೋನ್ಮುಖ ಬರಹಗಾರರಿಗೆ ಆಸರೆಯಾಗಿದ್ದರು.

ರಂಗಭೂಮಿ ಕಲಾವಿದರಾಗಿಯೂ ಮನಗೆದ್ದವರು. ವಿಷ್ಣು ನಾಯ್ಕ ನಿಧನಕ್ಕೆ ಕೆನರಾ ವೆಲಫೇರ್ ಟ್ರಸ್ಟ್ , ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್, ದಿನಕರ ವೇದಿಕೆ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!