ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಅಣೆಕಟ್ಟೆಯಲ್ಲಿ ಕ್ರೆಸ್ಟ್ ಗೇಟ್ ಕೊಚ್ಚಿಹೋದ ಘಟನೆ ಬೆನ್ನಲ್ಲೇ ಕರ್ನಾಟಕದ ಹಳೆಯ ಜಲಾಶಯಗಳಲ್ಲಿ ಒಂದಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯ ಕುರಿತು ಜನರಲ್ಲ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಕೆಆರ್’ಎಸ್ ಜಲಾಶಯ ಸುಭದ್ರವಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಜಲಾಶಯ ಗಟ್ಟಿ ಮುಟ್ಟಾಗಿದೆ. ಜನ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಜಲಾಶಯದ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕಾಲಕಾಲಕ್ಕೆ ಜಲಾಶಯದ ಸ್ಥಿತಿಗತಿ ಪರಾಮರ್ಶಿಸಿ ರಿಪೇರಿಯಂತಹ ಚಟುವಟಿಕೆಗಳನ್ನು ಕೈಗೊಂಡು ಕೃಷ್ಣರಾಜಸಾಗರ ಜಲಾಶಯ ಸುಸ್ಥಿತಿಯಲ್ಲಿ ಇಟ್ಟಿದೆ, ಜಲಾಶಯ ಸುಭದ್ರವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.