ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರವನ್ನು ಒಂದು ಪೆನ್ ಡ್ರೈ ಮೂಲಕ ಅಲುಗಾಡಿಸಲು ಹೊರಟ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಅನೇಕಲ್ ಜಿಲ್ಲೆಯ ಇಂಡ್ಲವಾಡಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಜಮೀರ್ ಹೆಚ್ಡಿಕೆ ಪೆನ್ ಡ್ರೈವ್ ನಲ್ಲಿ ಏನೂ ಇಲ್ಲ, ಖಾಲಿ. ಸುಮ್ಮನೆ ಎಲ್ಲರನ್ನ ಯಾಮಾರಿಸುತ್ತಿದ್ದಾರೆ ಎಂದು ಎಂದು ಎಂದರು.
ಪೆನ್ಡ್ರೈವ್ ತೆಗೆದು ತೋರಿಸಿ ಮತ್ತೆ ಜೇಬಿಗೆ ಹಾಕಿಕೊಳ್ಳುತ್ತಾರೆ. ಒಂದು ವಾರದಿಂದ.ಕುಮಾರಸ್ವಾಮಿ ಬರೀ ಇದನ್ನೆ ಮಾಡುತ್ತಿದ್ದಾರೆ . ಅವರ ಪೆನ್ಡ್ರೈವ್ನಲ್ಲಿ ಏನೂ ಇಲ್ಲ, ಏನಾದರೂ ಇದ್ದರೆ ಇಷ್ಟೊತ್ತಿಗೆ ತೋರಿಸುತ್ತಿದ್ದರು ಎಂದು ಜಮೀರ್ ಹೇಳಿದರು.