July 28, 2026
Tuesday, July 28, 2026
spot_img

ಪ್ರಧಾನಿ ಮೋದಿ ವಿರುದ್ದದ ಹೇಳಿಕೆಗೆ ನೊಟೀಸ್: ಚುನಾವಣಾ ಆಯೋಗಕ್ಕೆ ಖರ್ಗೆ ಕೊಟ್ಟ ರಿಯಾಕ್ಷನ್ ಏನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರ ಕುರಿತು ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗವು ಶೋಕಾಸ್ ನೊಟೀಸ್ ಜಾರಿಗೊಳಿಸಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಂಜೆ ನಮ್ಮ ಜನರು ಉತ್ತರಿಸುತ್ತಾರೆ ಎಂದು ತಿಳಿಸಿದರು.

ನನ್ನ ಮಾತಿನ ಉದ್ದೇಶ ಬೇರೆಯಾಗಿತ್ತು. ನಾನು ಯಾವ ರೀತಿ ರಾಜಕೀಯವಾಗಿ ಸರಕಾರಿ ಸಂಸ್ಥೆ ಮೂಲಕ ಭಯ ಸೃಷ್ಟಿಸುತ್ತಾರೆ ಎಂದು ಹೇಳಲು ಆ ಪದವನ್ನು ಬಳಸಿದೆ. ಚುನಾವಣೆ ಸಮಯದಲ್ಲಿ ರಾಜಕೀಯದ ಮೇಲೆ ಪ್ರಭಾವ ಬೀರಲು ಸಿಬಿಐ, ಇಡಿ, ಆದಾಯ ಇಲಾಖೆಗಳನ್ನು ಬಳಸಿಕೊಳ್ಳುತ್ತಾರೆ. ಈ ಎಲ್ಲಾ ವಿಚಾರಗಳನ್ನು ತಿಳಿಸಲು ನಾನು ಆ ಪದ ಬಳಸಿದೆ ಎಂದು ಸ್ಪಷ್ಟನೆ ನೀಡಿದರು.

ಹೀಗಾಗಿ ಚುನಾವಣಾ ಆಯೋಗದ ನೊಟೀಸ್ ಬರಲಿ, ನಾವು ಉತ್ತರಿಸುತ್ತೇವೆ. ನಮ್ಮ ಜನರು ಅದಕ್ಕೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿ ವಿರುದ್ಧದ ಖರ್ಗೆ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗವು ಮನಗಂಡು ನೊಟೀಸ್ ನೀಡಿತ್ತು. ಈ ಸಂಬಂಧ ಬಿಜೆಪಿ ನಿಯೋಗವು ಕೂಡ ಆಯೋಗಕ್ಕೆ ದೂರು ನೀಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !