ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದಿದಂದ ಸಾಕಷ್ಟು ನಟಿಯರು ಬಾಲಿವುಡ್ಗೆ ಹೋಗಿ ಮಿಂಚಿದ್ದಾಯ್ತು, ಇದೀಗ ಕನ್ನಡದ ನಟರ ಸರದಿಯಾಗಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ ಬಾಲಿವುಡ್ಗೆ ಹಾರಲಿದ್ದಾರೆ, ಪೊಗರು’ ಸಿನಿಮಾ ರಿಲೀಸ್ ಆಗಿ 3 ವರ್ಷ ಕಳೆದರೂ ಫ್ಯಾನ್ಸ್ಗೆ ಅವರ ಚಿತ್ರಗಳ ಬಗ್ಗೆ ಏನು ಅಪ್ಡೇಟ್ ಸಿಗದೇ ನಿರಾಶರಾಗಿದ್ದರು. ಆದರೆ ತಮ್ಮ ಮುಂಬರುವ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಧ್ರುವ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು.
ಈಗ ಮಾರ್ಟಿನ್, ಕೆಡಿ ಚಿತ್ರಗಳ ಟ್ರೇಲರ್, ಟೀಸರ್ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿರುವಾಗಲೇ ಹೃತಿಕ್ ರೋಷನ್ ಜೊತೆ ಧ್ರುವ ಸರ್ಜಾ ನಟಿಸುವ ಕುರಿತು ಸ್ವೀಟ್ ನ್ಯೂಸ್ ಸಿಕ್ಕಿದೆ. ಹೃತಿಕ್ ಅಭಿನಯದ ವಾರ್ ೨ ಸಿನಿಮಾದಲ್ಲಿ ನಟನ ತಮ್ಮನ ಪಾತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ.