ಹೆಲ್ತಿ ಸ್ಕಿನ್ ಬೇಕಾ? ದುಬಾರಿ ಕ್ರೀಮ್‌ಗಳನ್ನು ಕೊಳ್ಳುವ ಬದಲು ಒಳ್ಳೆಯ ಊಟ ಸೇವನೆ ಕಡೆ ಗಮನ ಕೊಡಿ. ಏನೆಲ್ಲಾ ತಿನ್ನಬೇಕು ನೋಡಿ..
ಫ್ಯಾಟ್ ಇರುವ ಮೀನು, ಸಾಲ್‌ಮನ್, ಮಾಕೆರಲ್, ಹೆರಿಂಗ್ ಮೀನುಗಳನ್ನು ಸೇವಿಸಿ
ಬೆಣ್ಣೆಹಣ್ಣಿನ ಸೇವನೆ ಮಾಡಿ, ಇದರಲ್ಲಿ ಆರೋಗ್ಯಕರ ಫ್ಯಾಟ್ ಇದೆ
ವಾಲ್‌ನಟ್‌ನಿಂದ ಚರ್ಮ ಹಾಗೂ ಮೆದುಳಿಗೂ ಉಪಯೋಗ ಇದೆ.
ಸ್ನ್ಯಾಕ್ಸ್ ರೀತಿ ಸೂರ್ಯಕಾಂತಿ ಬೀಜಗಳನ್ನು ಸೇವಿಸಿ, ಇವು ನ್ಯೂಟ್ರಿಯಂಟ್ಸ್‌ಗಳನ್ನು ಒಳಗೊಂಡಿದೆ.
ಸಿಹಿಗೆಣಸಿನಲ್ಲಿ ಇರುವ ವಿಟಮಿನ್ ಎ ನಿಮ್ಮ ಚರ್ಮಕ್ಕೆ ಅತ್ಯಾವಶ್ಯಕ
ಕೆಂಪು, ಹಳದಿ ಬೆಲ್ ಪೆಪ್ಪರ‍್ಸ್ ಸೇವಿಸಿ, ಇದರಲ್ಲಿ ಬೀಟಾ ಕೆರೋಟಿನ್ ಅಂಶವಿದೆ.
ಬ್ರೊಕೊಲಿಯಲ್ಲಿ ಝಿಂಕ್, ವಿಟಮಿನ್ ಎ ಹಾಗೂ ವಿಟಮಿನ್ ಸಿ ಇರುವುದರಿಂದ ಚರ್ಮ ಡ್ರೈ ಆಗುವುದನ್ನು ತಡೆಗಟ್ಟುತ್ತದೆ.
ಟೊಮ್ಯಾಟೊದಲ್ಲಿ ಕೂಡ ವಿಟಮಿನ್ ಸಿ ಇದೆ, ಮುಖ ಸುಕ್ಕುಗಟ್ಟುವುದನ್ನು ಟೊಮ್ಯಾಟೊ ತಡೆಯುತ್ತದೆ.