ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ತಿಂಗಳಿನಿಂದ ಮುಂದುವರಿಯುತ್ತಿರುವ ಯುದ್ಧ ಇನ್ನಷ್ಟು ಆತಂಕಕಾರಿ ಹಂತ ತಲುಪಿದೆ. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಇರಾನ್ನ ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ನಡೆದ ದಾಳಿ ಜಾಗತಿಕ ಚಿಂತೆಗೆ ಕಾರಣವಾಗಿದೆ.
ಶನಿವಾರ ನಡೆದ ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಸ್ಥಾವರದ ಸಹಾಯಕ ಕಟ್ಟಡಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಆದರೆ ವಿಕಿರಣ ಮಟ್ಟದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ ಎಂದು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಸ್ಪಷ್ಟಪಡಿಸಿದೆ.
ಇದನ್ನೂ ಓದಿ:
ಈ ದಾಳಿಯ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ಪರಮಾಣು ಸ್ಥಾವರದ ಮೇಲೆ ಮತ್ತೆ ದಾಳಿ ನಡೆದರೆ ಅದರ ಪರಿಣಾಮ ಕೇವಲ ಟೆಹ್ರಾನ್ಗೆ ಸೀಮಿತವಾಗುವುದಿಲ್ಲ. ವಿಕಿರಣ ಸೋರಿಕೆ ಗಲ್ಫ್ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಸೌದಿ ಅರೇಬಿಯಾ ಸೇರಿದಂತೆ ಇಡೀ ಪ್ರದೇಶಕ್ಕೆ ಭಾರಿ ಅಪಾಯ ಉಂಟುಮಾಡಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ IAEA ಮುಖ್ಯಸ್ಥ ರಫೇಲ್ ಗ್ರೋಸಿ, ಪರಮಾಣು ವಿದ್ಯುತ್ ಸ್ಥಾವರಗಳು ಯಾವ ಸಂದರ್ಭದಲ್ಲೂ ದಾಳಿಗೆ ಗುರಿಯಾಗಬಾರದು ಎಂದು ಹೇಳಿದೆ. ಮುಂದಿನ ಕೆಲವು ದಿನಗಳು ಈ ಯುದ್ಧದ ದಿಕ್ಕನ್ನು ನಿರ್ಧರಿಸುವ ಮಹತ್ವದ ಅವಧಿಯಾಗಲಿದೆ.



