FOLLOWUP | ನ್ಯಾಮತಿ ಎಸ್‌ಬಿಐ ಬ್ರ್ಯಾಂಚ್‌ ಕಳವು: ಒಂದು ಸುಳಿವೂ ಬಿಟ್ಟು ಹೋಗದ ಖದೀಮರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೆಲ ದಿನಗಳ ಹಿಂದೆ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನ ದರೋಡೆ ಮಾಡಲಾಗಿದೆ. ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನ ಹಾಗೂ ಹಣ ಎಲ್ಲವನ್ನೂ ಕದ್ದೊಯ್ಯಲಾಗಿದೆ. ಇದರ ಒಟ್ಟು ಮೊತ್ತ ಬರೋಬ್ಬರಿ 13 ಕೋಟಿ ರೂಪಾಯಿ.

ಹೌದು, ಬ್ಯಾಂಕ್​ ಲಾಕರ್​​ನ 509 ಬ್ಯಾಗ್​ಗಳಲ್ಲಿ ಇದ್ದ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ಯ್ವಾಡ್ ತಂಡ ತಪಾಸಣೆ ನಡೆಸಿತು. ಆದರೆ ಇದುವರೆಗೂ ಒಂದು ಸುಳಿವು ಸಿಕ್ಕಿಲ್ಲ. ಬ್ಯಾಂಕ್ ಹೊರಗೆ, ಒಳಗೆ ಎಲ್ಲ ಕಡೆ ತಡಕಾಡಿದರೂ ಕಳ್ಳರ ಹೆಜ್ಜೆ ಗುರುತು ಮಾತ್ರ ಪತ್ತೆಯಾಗಿಲ್ಲ.

ಕಳ್ಳರು ತುಂಬಾ ದಿನಗಳಿಂದ ಪ್ಲ್ಯಾನ್‌ ಮಾಡಿಯೇ ಒಂದೂ ಸುಳಿವು ಬಿಟ್ಟು ಹೋಗದಂತೆ ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ಜನ ವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. ಎಸ್​ಬಿಐ ಬ್ಯಾಂಕ್​ ಸುತ್ತ ಗಿಡಗಂಟಿಗಳು ಬೆಳೆದಿವೆ. ಕಳ್ಳರು, ಸೋಮವಾರ ರಾತ್ರಿ ಬ್ಯಾಂಕ್​ನ ಕಿಟಕಿಯನ್ನು ಗ್ಯಾಸ್​ ಕಟರ್​​ನಿಂದ ಕಟ್​ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್​ ಅನ್ನು ಕೂಡ ಗ್ಯಾಸ್ ಕಟರ್​ನಿಂದ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಬೆರಳಚ್ಚು ಗುರುತು ಸಿಗದೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಶ್ವಾನಕ್ಕೆ ವಾಸನೆ ಗ್ರಹಿಕೆಯಾಗಬಾರದೆಂದು ಬ್ಯಾಂಕ್ ತುಂಬೆಲ್ಲ ಖಾರದ ಪುಡಿ ಹಾಕಿ ಪರಾರಿಯಾಗಿದ್ದಾರೆ. ಜೊತೆಗೆ ಬ್ಯಾಂಕ್​ನ ಸಿಸಿ ಟಿವಿಯ ಡಿವಿಆರ್ ಅನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ.

ಇಷ್ಟು ದಿನವಾದರೂ ಕಳ್ಳರ ಒಂದು ಸುಳಿವೂ ಸಿಗದ ಕಾರಣ ಜನ ಭಯಭೀತರಾಗಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಪತ್ತೆ ಮಾಡಿ ಹಣ ವಾಪಾಸು ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!