ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
1 ಕಪ್ ಓಟ್ಸ್
1/2 ಕಪ್ ರವೆ (ಉಪ್ಮಾ ರವೆ/ಇಡ್ಲಿ ರವೆ)
3/4 ಉಪ್ಪು
1/2 ಅಡಿಗೆ ಸೋಡಾ
1 ಚಮಚ ಜೀರಿಗೆ
1 ಚಮಚ ಶುಂಠಿ
2 ಹಸಿರು ಮೆಣಸಿನಕಾಯಿ
2 ಟೇಬಲ್ಸ್ಪೂನ್ ಕ್ಯಾಪ್ಸಿಕಂ
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು
2 ಟೇಬಲ್ಸ್ಪೂನ್ ಕ್ಯಾರೆಟ್, ನೀರು, ಮೊಸರು
ಮಾಡುವ ವಿಧಾನ:
ಒಂದು ಪ್ಯಾನ್‌ಗೆ ಬಿಸಿಯಾದ ಮೇಲೆ ಕಪ್ ಓಟ್ಸ್ ಹಾಕಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ, ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ, ಬಳಿಕ ಅದೇ ಪ್ಯಾನ್‌ಗೆ ರವೆ ಹಾಕಿ ವಾಸನೆ ಬರುವವರೆಗೆ ಹುರಿದುಕೊಳ್ಳಿ. ಈಗ ಓಟ್ಸ್ ಮಿಕ್ಸಿ ಮಾಡಿ ನುಣ್ಣಗೆ ಪುಡಿ ಮಾಡಿ. ಪುಡಿ ಮಾಡಿದ ಓಟ್ಸ್, ರವೆಯನ್ನು ಒಂದು ಬೌಲ್‌ಗೆ ಹಾಕಿ ಉಪ್ಪು, ಸೋಡಾ, ಜೀರಿಗೆ ಹಾಕಿ ಒಮ್ಮೆ ಮಿಕ್ಸ್ ಮಾಡಿ. ನಂತರ ಅದಕ್ಕೆ ತುರಿದ ಶುಂಠಿ, ಮೆಣಸಿನಕಾಯಿ, ಕ್ಯಾಪ್ಸಿಕಂ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಕಲಸಿಕೊಳ್ಳಿ ಅಗತ್ಯವಿರುವ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 15/30ನಿಮಿಷ ಬಿಟ್ಟು ಬಿಡಿ.
ನಂತರ ಇಟ್ಲಿ ಪ್ಲೇಟಿಗೆ ಎಣ್ಣೆ ಸವರಿ ಹಿಟ್ಟು ಹಾಕಿ ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಹಬೆಯಲ್ಲಿ ಬೇಯಿಸಿದರೆ ಓಟ್ಸ್ ಇಡ್ಲಿ ರೆಡಿ. ಚಟ್ನಿ ಅಥವಾ ಸಾಂಬಾರಿನ ಜೊತೆ ತಿನ್ನಲು ರುಚಿಯಾಗಿರುತ್ತದೆ.