HEALTH | 30 ದಾಟಿದ ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚು, ಇದನ್ನು ಕರಗಿಸೋದು ಹೇಗೆ?

30ರ ನಂತರ ಮಹಿಳೆಯರಲ್ಲಿ ಬೊಜ್ಜು ಕಾಣಿಸುತ್ತದೆ. ಇದನ್ನು ಹೋಗಲಾಡಿಸೋದು ತುಂಬಾನೇ ಕಷ್ಟ. ಯಾವುದೇ ಬಟ್ಟೆ ಹಾಕಿಕೊಂಡರೂ ಹೊಟ್ಟೆ ಮಾತ್ರ ಎದ್ದು ಕಾಣಿಸುತ್ತದೆ. ಹೀಗಾದಾಗ ಏನು ಮಾಡೋದು? ಯಾವ ಪದಾರ್ಥಗಳಿಂದ ಬೊಜ್ಜು ಕಡಿಮೆ ಆಗುತ್ತದೆ ನೋಡಿ..

ಅಗಸೆ ಬೀಜ: ಅಗಸೆ ಬೀಜಗಳು ಆರೋಗ್ಯಕ್ಕೆ ಮಾತ್ರವಲ್ಲದೇ ತೂಕ ನಷ್ಟಕ್ಕೂ ಉತ್ತಮವಾಗಿದೆ. ಅಗಸೆ ಬೀಜಗಳು ದೇಹದಲ್ಲಿನ ಹೆಚ್ಚುವರಿ ನೀರನ್ನು ತಡೆಯುತ್ತದೆ. ಈಸ್ಟ್ರೊಜೆನ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ದಾಲ್ಚಿನ್ನಿ: ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಕಾರ್ಟಿಸೋಲ್ ಹಾರ್ಮೋನ್ ಒತ್ತಡವನ್ನು ಉಂಟು ಮಾಡುತ್ತದೆ. ಇದು ಹೊಟ್ಟೆಯಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ದಾಲ್ಚಿನ್ನಿ ಈ ಹಾರ್ಮೋನ್ ಮಟ್ಟ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸಬ್ಜಾ ಬೀಜ: ಸಬ್ಜಾ ಬೀಜಗಳಲ್ಲಿ ನಾರಿನಂಶ ಅಧಿಕವಾಗಿದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಕೆಟ್ಟ ಕೊಬ್ಬು ಕರಗಿಸುವಲ್ಲಿ ಭರ್ಜರಿಯಾಗಿ ಕೆಲಸ ಮಾಡುತ್ತದೆ. ಇದರ ಕಡಿಮೆ ಕ್ಯಾಲೋರಿಗಳು ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಉತ್ತಮವಾಗಿವೆ. ಇದಕ್ಕಾಗಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ತೆಗೆದುಕೊಂಡು ಗಾರ್ಗ್ಲ್ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ.

ಬೇಳೆ ಕಾಳುಗಳು: ಬೇಳೆಕಾಳುಗಳಲ್ಲಿ ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ಬಿ’, ಫೈಬರ್ ಹಾಗೂ ಪ್ರೋಟೀನ್‌ಗಳಂತಹ ಪೋಷಕಾಂಶಗಳು ಹೇರಳವಾಗಿವೆ. ಇದು ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಮೇಯೊ ಕ್ಲಿನಿಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯವನ್ನು ತಿಳಿಸುತ್ತದೆ.

ವಿವಿಧ ಹಸಿರು ಸೊಪ್ಪುಗಳು: ಹಸಿರು ಸೊಪ್ಪುಗಳಲ್ಲಿ ಮೆಗ್ನೀಸಿಯಮ್​ ಸಮೃದ್ಧವಾಗಿದೆ. ಇವುಗಳ ಸೇವನೆ ಮಾಡುವುದರಿಂದ ಒತ್ತಡ, ಚಿಂತೆ ಹಾಗೂ ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹ ಮತ್ತು ಹೊಟ್ಟೆಯಲ್ಲಿ ಸಂಗ್ರಹವಾದ ಕೆಟ್ಟ ಕೊಬ್ಬನ್ನು ಪರೋಕ್ಷವಾಗಿ ಕಡಿಮೆ ಮಾಡಲು ಪೂರಕವಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!