ಇಂಜಿನಿಯರ್‌ಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಆರ್‌. ಅಶೋಕ್‌ ಕ್ಷಮೆಗೆ ಡಿಕೆಶಿ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಎಂಜಿನಿಯರ್‌ಗಳನ್ನು ಮನೆಹಾಳರು ಎಂದು ವಿಧಾನಸಭೆಯಲ್ಲಿ ನಿಂದಿಸಿರುವ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ತಕ್ಷಣ ಎಂಜಿನಿಯರ್‌ಗಳ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಅಣೆಕಟ್ಟೆಗಳು, ವಿದ್ಯುತ್ ಯೋಜನೆಗಳು, ಬೃಹತ್ ಕಟ್ಟಡಗಳು, ಐಟಿಬಿಟಿ ಕ್ಷೇತ್ರ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅನೇಕ ಕ್ಷೇತ್ರಗಳಲ್ಲಿ ಎಂಜಿನಿಯರ್‌ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯ ಮತ್ತು ದೇಶದ ಪ್ರಗತಿಯ ರೂವಾರಿಗಳನ್ನು ಮನೆಹಾಳರು ಎಂದು ಕರೆದಿರುವುದು ಸರಿಯಲ್ಲ.

ಅಶೋಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಡಿ.ಕೆ. ಶಿವಕುಮಾರ್‌, ಎಂಜಿನಿಯರ್‌ಗಳನ್ನು ಅವಹೇಳನ ಮಾಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!