ಆಕ್ಷೇಪಾರ್ಹ ವಿಡಿಯೋ ಕಂಟೆಂಟ್‌: ಇನ್ಸ್ಟಾಗ್ರಾಮ್‌ನ ʼಮೆಟ್ರೋ ಚಿಕ್ಸ್‌ʼ ಪೇಜ್‌ ವಿರುದ್ಧ ಎಫ್‌ಐಆರ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ವಿಕೃತಿ ಮೆರೆದ ವಿಚಾರ ಬೆಳಕಿಗೆ ಬಂದಿದೆ.

metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಲಾಗಿತ್ತು.  ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದರು.

ಮೆಟ್ರೋ ರೈಲಿನ ಒಳಗೆ, ನಿಲ್ದಾಣದಲ್ಲಿ ಹುಡುಗಿಯರ ಆಕ್ಷೇಪಾರ್ಹ ರೀತಿಯ ವಿಡಿಯೋಗಳನ್ನು ರೆಕಾರ್ಡ್‌ ಮಾಡಲಾಗಿತ್ತು. ಈ ಖಾತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಡಿಯೋಗಳು ಡಿಲೀಟ್‌ ಆಗಿದೆ. ಸದ್ಯ ಪೇಜ್‌ ಕೂಡ ಡಿಲೀಟ್‌ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!