ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ಹಾಗೂ ನಟ ದರ್ಶನ್ ಫ್ಯಾನ್ಸ್ ನಡುವಿನ ಸೋಷಿಯಲ್ ಮೀಡಿಯಾ ವಾರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಈ ವಿವಾದಕ್ಕೆ ನಟ ಲೂಸ್ ಮಾದ ಯೋಗೇಶ್ ಕೂಡ ಎಂಟ್ರಿಯಾಗಿದ್ದು, ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. “ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶ ಕಳಿಸುವವರನ್ನು ಕರೆದು ಚಪ್ಪಲಿಯಲ್ಲಿ ಹೊಡೆಯಬೇಕು,” ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, “ಅವರಿಗೆ ಜ್ಞಾನವಿಲ್ಲ. ಸ್ಟಾರ್ ವಾರ್ ಎಲ್ಲೆಲ್ಲೂ ಕಾಮನ್. ಆದರೆ ಪರ್ಸನಲ್ ಆಗಿ ಟಾರ್ಗೆಟ್ ಮಾಡುವುದು ತಪ್ಪು. ರಮ್ಯಾ ಅವರು ಕಂಪ್ಲೀಟ್ ಕೊಟ್ಟದ್ದು ಒಳ್ಳೆಯದು. ದರ್ಶನ್ ಅವರು ಮುಂದೆ ಬಂದು ತಮ್ಮ ಅಭಿಮಾನಿಗಳಿಗೆ ಮಾರ್ಗದರ್ಶನ ನೀಡಿದರೆ ಹೆಚ್ಚು ಒಳ್ಳೆಯದು,” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ತಮ್ಮ ಬಳಿ ಕೂಡ ಇಂತಹ ಅನುಭವವಿರುವುದನ್ನು ಹಂಚಿಕೊಂಡ ನಟ ಯೋಗಿ, “ಇಂಡಸ್ಟ್ರಿಗೆ ಹೊಸದಾಗಿ ಕಾಲಿಟ್ಟಾಗ ನನಗೂ ಇಂಥದ್ದೇ ಅನುಭವವಾಗಿದೆ. ಯಾರೋ ಒಬ್ಬರು ಬ್ಲೇಡ್ ಹಾಕಿದ್ರು,” ಎಂದು ಬಹಿರಂಗಪಡಿಸಿದರು.
ಇತ್ತ, ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಅಭಿನಂದನೆ ಸಲ್ಲಿಸಿ ‘ಸಾಮಾನ್ಯ ಜನರಿಗೂ ನ್ಯಾಯ ಸಿಗುತ್ತದೆ ಎಂಬ ಆಶಾಕಿರಣ’ ಎಂದು ಬರೆದಿದ್ದರು. ಇದರಿಂದ ಕೋಪಗೊಂಡ ಕೆಲವು ಡಿ ಬಾಸ್ ಫ್ಯಾನ್ಸ್ ಖಾತೆಗಳಿಂದ ಅವ್ರಿಗೆ ಅಶ್ಲೀಲ ಸಂದೇಶಗಳ ಭಾರೀ ಪ್ರವಾಹ ಹರಿದುಬಂದಿತು. ಇದರ ಬೆನ್ನಲ್ಲೇ ರಮ್ಯಾ ಅವರು ಮಹಿಳಾ ಆಯೋಗ ಹಾಗೂ ಪೊಲೀಸ್ ಕಮೀಷನರ್ ಬಳಿ ದೂರು ನೀಡಿದ್ದು, ಈಗಾಗಲೇ 43 ಜನ ಫ್ಯಾನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.