ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣ: ಆರೋಪಿ ಕಾರ್ತಿಕ್ ಗೌಡ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾರ್ತಿಕ್ ಗೌಡನನ್ನು ಎಸ್ ಐ ಟಿ ಬಂಧಿಸಿದೆ.

ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್‌ ಅನ್ನು ವಕೀಲ ದೇವರಾಜೇಗೌಡಗೆ ನೀಡಿದ ಆರೋಪದಲ್ಲಿ ಕಾರ್ತಿಕ್ ಗೌಡನನ್ನು ಮೈಸೂರು-ಹಾಸನ ಗಡಿಭಾಗದಲ್ಲಿ ಬಂಧಿಸಲಾಗಿದೆ.

ಪೆನ್‌ಡ್ರೈವ್‌ ಹಂಚಿಕೆ ಆರೋಪದಲ್ಲಿ ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಕಾರ್ತಿಕ್‌ ಗೌಡ, ಪುಟ್ಟಿ ಅಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗೂ ಚೇತನ್ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಈ ಪೈಕಿ ನವೀನ್‌ ಗೌಡ ಹಾಗೂ ಚೇತನ್‌ನನ್ನು ಇತ್ತೀಚೆಗೆ ಎಸ್‌ಐಟಿ ಬಂಧಿಸಿತ್ತು. ಇದೀಗ ಕಾರ್ತಿಕ್‌ ಗೌಡನನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!