ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಏಕದಿನ ವಿಶ್ವಕಪ್ (ODI WorldCup) ವೇಳಾಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಐಸಿಸಿ (ICC) ಈ ಬಾರಿಯ ಟಾಪ್-5 ಹೈವೋಲ್ಟೇಜ್ ಪಂದ್ಯಗಳನ್ನು ಹೆಸರಿಸಿದೆ.
ಲೀಗ್ ಹಂತದಲ್ಲಿ ಪ್ರತಿ ತಂಡವೂ ತಲಾ 9 ಪಂದ್ಯಗಳನ್ನಾಡಲಿದ್ದು, ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಈ ನಡುವೆ ಐಸಿಸಿ ಟಾಪ್-5 ಪಂದ್ಯಗಳ ಪಟ್ಟಿಯನ್ನ ಹಂಚಿಕೊಂಡಿದೆ.
1. ಭಾರತ Vs ಪಾಕಿಸ್ತಾನ – ಅಹಮದಾಬಾದ್ – ಅ.15
ಟಿ20 ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಅತ್ಯಂತ ರೋಚಕತೆಯಿಂದ ಕೂಡಿದ್ದ ಭಾರತ ಮತ್ತು ಪಾಕಿಸ್ತಾನ (Pakistan) ಪಂದ್ಯಗಳು ಈ ಬಾರಿಯೂ ಅದೇ ಹವಾ ಸೃಷ್ಟಿಸಿದೆ.
2. ಇಂಗ್ಲೆಂಡ್ Vs ನ್ಯೂಜಿಲೆಂಡ್ – ಅಹಮದಾಬಾದ್ – ಅ.5
2023 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ (England) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರಲಿದೆ. ಇದಕ್ಕೆ ಕಾರಣ 2019ರ ವಿಶ್ವಕಪ್ನ ಫೈನಲ್ನಲ್ಲಿ ನ್ಯೂಜಿಲೆಂಡ್ ಕಂಡ ವಿರೋಚಿತ ಸೋಲು. ಹೀಗಾಗಿ ಕಿವೀಸ್ ಪಡೆ ಹಾಲಿ ಚಾಂಪಿಯನ್ಸ್‌ಗಳಿಗೆ ಮೊದಲ ಪಂದ್ಯದಲ್ಲೇ ಸೋಲುಣಿಸಲು ಸಜ್ಜಾಗಿದೆ.
3. ಭಾರತ Vs ಆಸ್ಟ್ರೇಲಿಯಾ – ಚೆನ್ನೈ – ಅ.8
ಅ.8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನ ಎದುರಿಸುತ್ತಿದೆ. ಇದು 2023ರ ಕ್ರಿಕೆಟ್ ವಿಶ್ವಕಪ್ ಭಾರತದ ಮೊದಲ ಪಂದ್ಯವಾಗಿದ್ದು, ಇದನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡುವ ಗುರಿ ಹೊಂದಿದೆ.
4. ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ – ಲಕ್ನೋ – ಅ.13
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ 9 ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳನ್ನು ಮಾತ್ರವೇ ಗೆದ್ದಿತ್ತು. ಈ ಸಂದರ್ಭದಲ್ಲಿ ನಾಯಕತ್ವ ವಹಿಸಿದ್ದ ಫಾಫ್ ಡು ಪ್ಲೆಸಿಸ್ ಅಮೋಘ ಶತಕದೊಂದಿಗೆ ಮ್ಯಾಂಚೆಸ್ಟರ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿತ್ತು. ಆನಂತರ ಆಸ್ಟ್ರೇಲಿಯಾ ಎದುರು ದಕ್ಷಿಣ ಆಫ್ರಿಕಾ ಮುಖಾಮುಖಿಗುತ್ತಿದೆ. ಹಾಗಾಗಿ ಈ ಪಂದ್ಯ ಕುತೂಹಲ ಮೂಡಿಸಿದೆ.
5. ಬಾಂಗ್ಲಾದೇಶ Vs ಅಫ್ಘಾನಿಸ್ತಾನ – ಧರ್ಮಶಾಲಾ – ಅ.7
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನದ ಎದುರು ಬಾಂಗ್ಲಾದೇಶ ಮೊದಲ ಪಂದ್ಯವನ್ನಾಡಲಿದೆ. ಅಫ್ಘಾನಿಸ್ತಾನಕ್ಕೆ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಇನ್-ಫಾರ್ಮ್ ಸೀಮರ್ ಫಜಲ್ಹಕ್ ಫಾರೂಕಿ ಅವರ ಬೌಲಿಂಗ್ ಬಲವಿದ್ದರೆ, ಬಾಂಗ್ಲಾದೇಶಕ್ಕೆ ಲಿಟ್ಟನ್ ದಾಸ್, ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಂತಹ ಬ್ಯಾಟಿಂಗ್ ಬಲವಿದೆ.