ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದು ಚಂಡಮಾರುತ ಅಲ್ಲ, ಆಗ್ನೇಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿರುವುದು ಮಳೆಗೆ ಕಾರಣವಾಗಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇದ್ದು, ಇದನ್ನು ಪೂರ್ವ ಮುಂಗಾರು ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ.