ಒಡಿಶಾ ಸರ್ಕಾರದಿಂದ ಹೊಸ ನಿಯಮ, ಶಾಲಾ ಸಮಯದಲ್ಲಿ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದೆಲ್ಲೆಡೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಮನೆಯಿಂದ ಹೊರಬರಲಾರದೆ ಜನ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಹಿತದೃಷ್ಟಿಯಿಂದಾಗಿ ಒಡಿಶಾ ಸರ್ಕಾರ ಹೊಸ ನೀತಿಯನ್ನು ಜಾರಿ ಮಾಡಿದೆ.

ಬೆಳಗ್ಗೆ 8ಗಂಟೆಯಿಂದಲೇ ಅಧಿಕ ಬಿಸಿಲಿನ ಕಾರಣದಿಂದ ದೂರದಿಂದ ಶಾಲೆಗಳಿಗೆ ಬರುವ ಮಕ್ಕಳಿಗೆ ತೊಂದರೆಯಾಗದಂತೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿದ್ದಾರೆ. ಪ್ರತಿದಿನ 10 ರಿಂದ 4.30ರವರೆಗೆ ನಡೆಯುತ್ತಿದ್ದ ತರಗತಿ ಸಮಯ ಬದಲಾಗಿದೆ.

ಬದಲಾದ ಸಮಯದಲ್ಲಿ ಬೆಳಿಗ್ಗೆ 6:00 ರಿಂದ 9:00 ರವರೆಗೆ ಮೂರು ಗಂಟೆ ಕಾಲ ಮಾತ್ರ ತರಗತಿ ನಡೆಯಲಿದೆ ಎಂದು ಸರ್ಕಾರ ಹೇಳಿದೆ. ಈ ಆದೇಶ ಎಲ್ಲಾ ಶಾಲೆಗಳಲ್ಲೂ ಇಂದಿನಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!