ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಮೃತದೇಹ ಹಸ್ತಾಂತರಿಸುವಲ್ಲಿ ಗೊಂದಲವುಂಟಾಗಿದೆ. ಒಬ್ಬರ ಮೃತದೇಹವನ್ನು ಸಂಬಂಧವಿಲ್ಲದ ಮತ್ತೊಬ್ಬರ ಕುಟುಂಬಕ್ಕೆ ಹಸ್ತಾಂತರಿಸುವ ಘಟನೆ ನಡೆದಿದೆ. ತನ್ನ ಮಗನ ಮೃತದೇಹವನ್ನು ಪಡೆಯಲು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಭುವನೇಶ್ವರಕ್ಕೆ ಬಂದಿದ್ದಾರೆ. ಮಗನ ಶವ ನಾಪತ್ತೆಯಾಗಿದ್ದು, ಆತನ ಮಗನ ಮೃತದೇಹವನ್ನು ಬಿಹಾರ ಮೂಲದ ವ್ಯಕ್ತಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಶಿವನಾಥ್ ಅವರ ಪುತ್ರ ವಿಪುಲ್ ರೈ ಸಾವನ್ನಪ್ಪಿದ್ದಾರೆ. ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ರೈಲು ಅಪಘಾತ ತನ್ನ ಮಗನ ಪ್ರಾಣವನ್ನು ಬಲಿತೆಗೆದುಕೊಂಡಿದೆ ಎಂದು ರೈ ತಂದೆ ಹೇಳಿದ್ದಾರೆ. ಅಪಘಾತದ ದಿನ ಮಗ ತನ್ನ ಪತ್ನಿಗೆ ಕರೆಮಾಡಿ ‘ಮಮ್ಮಿ, ಸ್ವಲ್ಪ ಹೊತ್ತಿನಲ್ಲಿ ಹೌರಾ ತಲುಪುತ್ತೇನೆ’ ಎಂದು ಹೇಳಿದ ಸ್ವಲ್ಪ ಸಮಯದಲ್ಲೇ ಈ ದುರಂತ ನಡೆದು ಹೋಗಿದೆ ತಂದೆ ಕಣ್ಣೀರು ಸುರಿಸಿದರು.
ತನ್ನ ಮಗನ ಮೃತದೇಹವನ್ನು ಪಡೆಯಲು ತಾನು ಭುವನೇಶ್ವರದಲ್ಲಿರುವ ಕಳಿಂಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ್) ಹೋಗಿದ್ದೆ, ಆದರೆ ಅಲ್ಲಿನ ಹೆಲ್ಪ್ ಡೆಸ್ಕ್‌ನಲ್ಲಿ ಇನ್ನೊಬ್ಬ ವ್ಯಕ್ತಿಯ ಶವ ಪತ್ತೆಯಾಗಿದ್ದರಿಂದ ಬಿಹಾರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ನಗರದ ಏಮ್ಸ್‌ಗೆ ಹೋದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಡಿಎನ್‌ಎ ಪರೀಕ್ಷೆ ನಡೆಸಿ ಏಳು ದಿನದೊಳಗೆ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಶಿವನಾಥ್ ತಿಳಿಸಿದರು. ಟಿವಿಯಲ್ಲಿ ನನ್ನ ಮಗನ ಚಿತ್ರ ನೋಡಿ ಕೂಡಲೇ ಶವವನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದರು. ಮಗನ ಶವವನ್ನು ಈಗಾಗಲೇ ಬೇರೆಯವರಿಗೆ ಹಸ್ತಾಂತರಿಸಿರುವುದು ಅವರಿಗೆ ತಿಳಿದಿರಲಿಲ್ಲ. ಆತನಿಗೆ ಡಿಎನ್‌ಎ ಪರೀಕ್ಷೆ ಕೂಡ ನಡೆಸಲಾಗಿದ್ದು, ಏಳು ದಿನಗಳ ನಂತರ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.