ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸಂಪೂರ್ಣ ಫೇಲ್ ಆಗಿದೆ : ಅರುಣ್ ಸಿಂಗ್

ಹೊಸ ದಿಗಂತ ವರದಿ, ಗದಗ:

ದೇಶದಲ್ಲಿ ನಕ್ಸಲ್ ಸಮಸ್ಯೆ, ಜಮ್ಮು ಕಾಶ್ಮೀರದ ಉಗ್ರಗಾಮಿಗಳ ಸಮಸ್ಯೆ, ಗಡಿ ಸಮಸ್ಯೆಗಳನ್ನು ಬುಡದಿಂದ ಬೆಳೆಯುವ ಕಾರ್ಯ ಮಾಡಿದ್ದು ಕಾಂಗ್ರೆಸ್ ಸರಕಾರ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣಸಿಂಗ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶವನ್ನು ಒಡೆಯುವ ಶಕ್ತಿಗಳಿಗೆ ಬೆಳೆಸುವ ಶಕ್ತಿ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಜನರಿಗೆ ಗೊತ್ತಿರುವದರಿಂದ ಜನರ ಬೆಂಬಲ ಕಾಂಗ್ರೆಸ್‌ಗೆ ಸಿಗಲಿಲ್ಲ ಎಂದು ಹೇಳಿದ ಅವರು ಕಾಂಗ್ರೆಸ್ ನಾಯಕರೊಬ್ಬರು ಹಿಂದೂ ಪದವನ್ನು ಅಶ್ಲೀಲ ಎಂದು ಕರೆದು ಅದನ್ನು ಬೈಯುವ ಕೆಲಸ ಮಾಡಿದರು. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಕಾಂಗ್ರೆಸ್ ಮುಖಂಡ ದಿಗ್ವಿಜಯಸಿಂಗ್ ಮತ್ತು ಕಂಪನಿ ಪ್ರೆಸ್‌ಮೀಟ್ ಮಾಡಿ ಸಾಕ್ಷಿ ಕೇಳಿದರು. ದೇಶದ ಸೈನಿಕರ ಪರಾಕ್ರಮ ಪ್ರಶ್ನೆ ಮಾಡುವುದು ಕಾಂಗ್ರೆಸ್‌ನ ಚಾಳಿಯಾಗಿದೆ. ದೇಶದ ಎಕತೆ ಅಖಂಡತೆಯೊಂದಿಗೆ ಕಾಂಗ್ರೆಸ್ ಎಂದೂ ಕೈಜೋಡಿಸಿಲ್ಲ ಎಂದರು.

ನೆಹರೂ ಕಾಲದಲ್ಲಿಯೇ ಶೇಖ ಅಬ್ದುಲ್ಲಾ ಜೊತೆಗೂಡಿ ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜದ ಅಗ್ರಿಮೆಂಟ್ ಮಾಡಿದರು. ಆದರೆ, ಪ್ರದಾನಿ ಮೋದಿ ಆರ್ಟಿಕಲ್ 370 ಸಮಾಪ್ತಿ ಮಾಡಿದರು.

ಒಂದು ಕಡೆ ಕಾಂಗ್ರೆಸ್‌ನವರು ದೇಶವನ್ನು ಒಡೆಯುವ ಕಾರ್ಯ ಮಾಡಿದ್ದಾರೆ. ಆದರೆ, ಬಿಜೆಪಿ ದೇಶವನ್ನು ಜೋಡಿಸೋಕೆ, ದೇಶದ ಏಕತೆ, ಅಖಂಡತೆಗಾಗಿ ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಫೇಲ್ ಆಗಿದೆ ಎಂದು ಅರುಣಸಿಂಗ್ ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಸಚಿವ ಸಿ.ಸಿ.ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ ಸೇರಿದಂತೆ ಮುಂತಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!