ಹೊಸದಿಗಂತ ವರದಿ, ಹುಬ್ಬಳ್ಳಿ:
ಮಾಜಿ ಸಚಿವ ಹಾಗೂ ನಟ ಬಿ.ಸಿ. ಪಾಟೀಲ ನಿರ್ಮಾಣ, ಯೋಗರಾಜ ಭಟ್ ನಿರ್ದೇಶನದ ಕನ್ನಡ ಗರಡಿ ಸಿನಿಮಾ ನ. ೧೦ ರಂದು ರಾಜ್ಯಾದ್ಯಾಂತ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಈ ಕುರಿತು ಮಂಗಳವಾರ ಮಾಜಿ ಸಚಿವ ಹಾಗೂ ನಟ ಬಿ.ಸಿ. ಪಾಟೀಲ ಇಲ್ಲಿಯ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಕುಸ್ತಿಯನ್ನು ಕಥಾವಸ್ತುವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸೌಮ್ಯ ಫಿಲ್ಮ್ಸ್, ಕೌರವ ಪ್ರೋಡಕ್ಷನ್ ಹೌಸ್ ಲಾಛನದಲ್ಲಿ ವಜನಾ ಪಾಟೀಲ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರು.
ಕಳೆದ ವರ್ಷ ಹಿರೆಕೇರೂರನಲ್ಲಿ ಸಿನಿಮಾ ಚಿತ್ರೀಕರಣವನ್ನು ರೈತರಿಂದ ಆರಂಭಿಸಲಾಗಿತ್ತು. ಈಗ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ದವಾಗಿದೆ. ನ. ೧ಕರ್ನಾಟಕ ರಾಜ್ಯೋತ್ಸವ ದಿನದಂದು ರಾಣೆಬೆನ್ನೂರ ಮುನ್ಸಿಪಲ್ ಮೈದಾನದಲ್ಲಿ ಸಿನಿಮಾದ ಟ್ರೈಲರ್‌ಗೆ ನಟ ದರ್ಶನ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.