ಹೊಸ ದಿಗಂತ ವರದಿ, ಕಲಬುರಗಿ:
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಸುಧಾ ಮಂಗಲ ಕಾರ್ಯಕ್ರಮ ಸೇಡಂ ತಾಲೂಕಿನ ಮಳಖೇಡ ಉತ್ತರಾದಿ ಮಠ ಶ್ರೀ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ಇಂದಿನಿಂದ ಮೂರು ದಿನ ನಡೆಯಲಿದ್ದು, ಶ್ರೀಮನ್ಯಾಯಸುಧಾ ಮಂಗಲೋತ್ಸವಕ್ಕೆ ಗುರುವಾರ ಮೊದಲನೆ ದಿನ ಅದ್ಧೂರಿಯಾಗಿ ಚಾಲನೆ ಸಿಕ್ಕಿತು.
ದೇಶದ ಮೂಲೆ ಮೂಲೆಗಳಿಂದ ವಿದ್ವಾಂಸರು ಆಗಮಿಸಿದ್ದರು. ಸಹಸ್ರಾರು ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥರು ಮುದ್ರಾಧಾರಣೆ ಮಾಡಿದರು.ಬೆಳಗ್ಗೆ ಶ್ರೀ ಜಯತೀರ್ಥರ ಮೂಲ ವೃಂದಾವನಕ್ಕೆ ವೀಶೇಷ ಪೂಜೆ, ಪಂಚಾಮೃತಾಭಿಷೇಕ, ಅಲಂಕಾರ, ಹಸ್ತೋದಕ, ಶ್ರೀಪಾದಂಗಳವರಿಂದ ಶ್ರೀ ದಿಗ್ಬಿಜಯ ಮೂಲ ರಾಮದೇವರ ಪೂಜೆ, ಮಹಾಮಂಗಳಾರತಿ.
ನಂತರ ಸುಧಾ ಪರೀಕ್ಷಾರ್ಥಿಗಳಿಂದ ವಿಚಾರ ಗೋಷ್ಠಿ, ತೀರ್ಥ ಪ್ರಸಾದ ಸೇರಿ ವಿವಿದ ಕಾರ್ಯಕ್ರಮಗಳು ನಡೆದವು.