ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಗೆ ಮುಹೂರ್ತ ನಿಗದಿ ಮಾಡಲಾಗಿದ್ದು, ನ.27ರಂದು ರಾತ್ರಿ ಕದಿರು ತೆಗೆಯಲಾಗುತ್ತದೆ.
ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಕರೆಯಲಾಗುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಮ್ಮಂಗಲ ಜ್ಯೋತಿಷ್ಯರು ಮುಹೂರ್ತ ನಿಗದಿ ಮಾಡಿದರು.
ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಂದು ರಾತ್ರಿ 7.20 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 8.20 ಗಂಟೆಗೆ ಕದಿರು ಕುಯ್ಯುವುದು, 9.20 ಗಂಟೆಗೆ ಪ್ರಸಾದ ಸ್ವೀಕಾರ ನಡೆಯಲಿದೆ.
ಜಿಲ್ಲೆಯ ಇತರೆಡೆಯಲ್ಲಿ ರಾತ್ರಿ 7.45 ಗಂಟೆಗೆ ನೆರೆ ಕಟ್ಟುವುದು, 8.45 ಗಂಟೆಗೆ ಕದಿರು ಕುಯ್ಯುವುದು, ರಾತ್ರಿ 9.45 ಗಂಟೆಗೆ ಭೋಜನಕ್ಕೆ ಶುಭ ಮುಹೂರ್ತವೆಂದು ಹೇಳಲಾಗಿದೆ.