ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಪ್ರಸಿದ್ಧ ಪುಣ್ಯಕ್ಷೇತ್ರ, ಕೇರಳದ ಗುರುವಾಯೂರು ಶ್ರೀಕೃಷ್ಣನ ಸನ್ನಿಧಿಯಲ್ಲಿ ವಿಶೇಷ ತುಲಾಭಾರ ಸೇವೆ ನಡೆಯಿತು.

ಶ್ರೀಗಳ ಗೋಸಂರಕ್ಷಣಾ ಕಾರ್ಯವನ್ನು ಗೌರವಿಸುವ ನಿಟ್ಟಿನಲ್ಲಿ, ಸಂಪೂರ್ಣವಾಗಿ ದೇಶೀಯ ತಳಿಯ ಹಸುಗಳ ಬೆಣ್ಣೆಯನ್ನು ಬಳಸಿ ಈ ತುಲಾಭಾರ ಕೈಂಕರ್ಯವನ್ನು ನೆರವೇರಿಸಲಾಯಿತು. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಬೆಣ್ಣೆ, ಅದೂ ದೇಶೀಯ ತಳಿಯ ಗೋವಿನ ಬೆಣ್ಣೆಯಿಂದ ಜಗದ್ಗುರುಗಳಿಗೆ ನಡೆದ ಈ ಸೇವೆ ಭಕ್ತರ ಪಾಲಿಗೆ ವಿಶೇಷ ಹಾಗೂ ಭಕ್ತಿಪೂರ್ವಕ ಕ್ಷಣವಾಗಿ ಮೂಡಿಬಂದಿತು. ಶ್ರೀಮಠದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಭಕ್ತರು ಈ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳವರ ಅನುಗ್ರಹ ಪಡೆದು, ಶ್ರೀಕೃಷ್ಣ ದರ್ಶನದೊಂದಿಗೆ ಕೃತಾರ್ಥರಾದರು.
ಇದನ್ನೂ ಓದಿ:
ಗೋಕರ್ಣ ಮಂಡಲಾದ ಮನೆ ಮನೆಗಳಲ್ಲಿ, ಗೋಶಾಲೆಗಳಲ್ಲಿ ಗುರುವಾಯೂರು ನವನೀತ ಚೋರನಿಗೆ ಶ್ರೀಸಂಸ್ಥಾನದವರ ಮುಖಾಂತರ ಸಮರ್ಪಣೆಗಾಗಿ ತಯಾರಿಸಿದ ನವನೀತವು ನಿರೀಕ್ಷೆಗೆ ಮೀರಿದ ಸಂಗ್ರಹ ಅಭಿಯಾನವಾಗಿ ರೂಪುಗೊಂಡಿದೆ. ಲೆಕ್ಕಾಚಾರದಂತ ೧೫೦ ಕಿಲೊ ಬೆಣ್ಣೆ ಸಂಗ್ರಹವಾಗಿತ್ತು. ಶ್ರದ್ಧಾ ಭಕ್ತಿಯಲ್ಲಿ ಬೆಣ್ಣೆ ತಯಾರಿಸಿದ ಮಾತೆಯರಿಗೆ, ಸಂಯೋಜಿಸಿದ ಮಾತೃ ವಿಭಾಗದವರಿಗೆ, ಸಹಕರಿಸಿದ ಸೇವಾ ಹಾಗೂ ಇತರ ಪದಾಧಿಕಾರಿಳಿಗೆ, ಸಾಗಾಟಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ದೇವಸ್ಥಾನಕ್ಕೆ ತಲಪಿಸಿದ ತಂಡದವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.



