ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲ್ಫಿ ತೆಗೆಯುವಾಗ ನೀರುಪಾಲಾಗಿದ್ದ ಸಹೋದ್ಯೋಗಿಯ ದುಬಾರಿ ಮೊಬೈಲ್ ಫೋನ್ ಅನ್ನು ಹುಡುಕಲು ಇಡೀ ಜಲಾಶಯದ ನೀರನ್ನು ಖಾಲಿ ಮಾಡುವಂತೆ ಮೌಖಿಕ ಆದೇಶ ಹೊರಡಿಸಿದ್ದ ಸರ್ಕಾರಿ ಅಧಿಕಾರಿ ಇದೀಗ ಭಾರೀ ದಂಡ ತೆತ್ತಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆಯ ಅಧೀಕ್ಷಕ ಅಭಿಯಂತರರು ನೀರು ಖಾಲಿ ಮಾಡಿಸಲು ಮೌಖಿಕ ಆದೇಶ ನೀಡಿದ ಅಧಿಕಾರಿಯ ಸಂಬಳದಿಂದ ನಷ್ಟವನ್ನು ವಸೂಲಿ ಮಾಡಿ ಎಂದು ಮೇಲಾಧಿಕಾರಿಗೆ ಪತ್ರ ಬರೆದಿದ್ದರು. ಮೇಲಾಧಿಕಾರಿಯ ಸೂಚನೆಯಂತೆ ಅಧಿಕಾರಿಯ ಬಳಿ 53 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಲಾಗಿದೆ.