ಹಾವುಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಜೀವಿಗಳಾಗಿದ್ದರೂ, ಆಹಾರ, ಆಶ್ರಯ ಅಥವಾ ನೀರಿಗಾಗಿ ಕೆಲವೊಮ್ಮೆ ಮನೆಗಳ ಕಡೆಗೆ ಬರುತ್ತವೆ. ಹಾವುಗಳಿನ ನಮ್ಮ ಕುಟುಂಬದ ಸುರಕ್ಷತೆ ಮತ್ತು ಮನಶ್ಶಾಂತಿ ಕಾಪಾಡುವುದು ಅತ್ಯಂತ ಅಗತ್ಯ. ಹಾವುಗಳು ವಿಷಪೂರಿತವಾಗಿರುವ ಸಾಧ್ಯತೆ ಇರುವುದರಿಂದ, ಅವು ನಮ್ಮ ಮನೆಗಳ ಹತ್ತಿರ ಬಾರದಂತೆ ನೋಡಿಕೊಳ್ಳುವುದು ಬಹುಮುಖ್ಯ. ಕೆಲವು ಸರಳವಾದ ಆದರೂ ಪರಿಣಾಮಕಾರಿಯಾದ ಕ್ರಮಗಳನ್ನು ಅನುಸರಿಸುವುದರಿಂದ ಹಾವುಗಳನ್ನು ದೂರವಿಡಬಹುದು.
ಪರಿಸರ ಸ್ವಚ್ಛವಾಗಿಡಿ:
ಮನೆಯ ಸುತ್ತಲಿನ ಗಿಡಗಂಟಿಗಳು, ಪ್ಲಾಸ್ಟಿಕ್ ಚೀಲಗಳು, ಮರದ ತುಂಡುಗಳು, ಕಸದ ರಾಶಿ ಇತ್ಯಾದಿಗಳನ್ನು ತೆಗೆದುಬಿಡಿ. ಇಂತಹ ಸ್ಥಳಗಳು ಹಾವುಗಳಿಗೆ ಆಶ್ರಯತಾಣವಾಗುತ್ತದೆ.
ಹುಳುಹುಪ್ಪಟೆಗಳನ್ನು ನಿಯಂತ್ರಿಸಿ:
ಹಾವುಗಳು ಆಹಾರವನ್ನು ಹುಡುಕಿಕೊಂಡು ಬರುತ್ತವೆ. ಹೀಗಾಗಿ ಆಹಾರ ಮೂಲಗಳನ್ನು ತೊಡೆದುಹಾಕುವುದರಿಂದ ಹಾವುಗಳು ತಿನ್ನಲು ಏನನ್ನಾದರೂ ಹುಡುಕುತ್ತಾ ಮುಂದಕ್ಕೆ ಹೋಗಿಬಿಡುತ್ತವೆ. ಹಾವುಗಳು ತಿನ್ನಲು ಇಷ್ಟಪಡುವ ಕೀಟಗಳು ಇಲಿ ಹೆಗ್ಗಣಗಳು ನಿಮ್ಮ ಮನೆಯ ಸುತ್ತಲೂ ಇಲ್ಲದಂತೆ ಖಚಿತಪಡಿಸಿಕೊಳ್ಳಿ.
ನೀರು ನಿಲ್ಲದಂತೆ ಎಚ್ಚರ ವಹಿಸಿ:
ಹಾವುಗಳು ಹೆಚ್ಚಿನ ತೇವಾಂಶವಿರುವ ಪ್ರದೇಶಗಳಿಗೂ ಆಕರ್ಷಿತವಾಗುತ್ತವೆ. ಸಾಧ್ಯವಾದಲ್ಲೆಲ್ಲಾ ನಿಮ್ಮ ಅಂಗಳದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಈಜುಕೊಳಗಳು, ಕೊಳಗಳು ಮತ್ತು ಇತರ ನೀರಿನ ಮೂಲಗಳನ್ನು ಪರೀಕ್ಷಿಸುತ್ತೀರಿ.
ಹಾವು ತಡೆಗಟ್ಟುವ ಗಿಡಗಳು ಬೆಳೆಸಿ:
ಲೆಮನ್ ಗ್ರಾಸ್, ಮೆಣಸು, ಸರ್ಪಗಂಧಾ, ಚೆಂಡು ಹೂ, ಈರುಳ್ಳಿ ಮತ್ತು ಬೆಳ್ಳುಳ್ಳಿ ಗಿಡಗಳನ್ನು ಮನೆಯ ಸುತ್ತಲೂ ಬೆಳೆಸಿ. ಇವುಗಳ ಗಂಧದಿಂದ ಹಾವುಗಳು ದೂರವಿರುತ್ತವೆ.
ಹಳೆಯ ಉಪಾಯಗಳನ್ನು ಪ್ರಯತ್ನಿಸಿ:
ಹಾವು ಬರುವ ಸಾಧ್ಯತೆ ಇರುವ ಸ್ಥಳಗಳಿಗೆ ನಿಂಬೆ ಎಣ್ಣೆ, ಕರ್ಪೂರದ ನೀರು ಅಥವಾ ಮೊಸರು ಚುಮುಕಿಸುವುದು ಸಹ ಕೆಲವೊಮ್ಮೆ ಪರಿಣಾಮಕಾರಿ ಎನ್ನಲಾಗುತ್ತದೆ.
ಈ ಉಪಾಯಗಳನ್ನು ಅನುಸರಿಸುವ ಮೂಲಕ ನೀವು ಹಾವುಗಳನ್ನು ನಿಮ್ಮ ಮನೆಗೆ ಬರುವುದರಿಂದ ತಪ್ಪಿಸಬಹುದು ಮತ್ತು ನಿಮ್ಮ ಮನೆ ಪರಿಸರವನ್ನು ಹೆಚ್ಚು ಸುರಕ್ಷಿತವಾಗಿಡಬಹುದು.