ಎಣ್ಣೆ ಏಟಲ್ಲಿ ಕುಕೃತ್ಯ! ತಾಯಿಯನ್ನು ಕೊಂದು ಸುಟ್ಟು ಹಾಕಿ ಪಕ್ಕದಲ್ಲೇ ಮಲಗಿದ್ದ ಪುತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯನ್ನ ಕೊಂದು, ಆಕೆ ಮೃತ ದೇಹಕ್ಕೆ ಬೆಂಕಿ ಹಾಕಿ ಪಕ್ಕದಲ್ಲೇ ಮಲಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ ಪವನ್‌ ಹಕ್ಕಿಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಕಂಠಪೂರ್ತಿ ಕುಡಿದುಬಂದು ತಾಯಿಯ ಜೊತೆ ವಿನಾಕಾರಣ ಜಗಳ ತೆಗೆದಿದ್ದು, ಆಕೆಯನ್ನು ಕೊಂದು ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ, ಪ್ರಜ್ಞಾಹೀನನಾಗಿ ಪಕ್ಕದಲ್ಲೇ ಮಲಗಿದ್ದನು.

ಅಕ್ಕಪಕ್ಕದವರು ದೌಡಾಯಿಸಿ ಬಂದು ನೋಡುವಷ್ಟರಲ್ಲೇ ಭವಾನಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು. ವಿಷಯ ತಿಳಿದ ಕೂಡಲೇ ಆಲ್ಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಕೊಂದ ಪಾಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ 2 ತಿಂಗಳ ಹಿಂದೆ ಪವನ್ ಕುಡಿದು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಗ್ರಾಮದ ಹಿರಿಯರು ಬುದ್ದಿ ಹೇಳಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!