March 24, 2026
Tuesday, March 24, 2026
spot_img

ಓಮನ್ ಕರಾವಳಿಯಲ್ಲಿ 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಒಮಾನ್ ಕರಾವಳಿಯಲ್ಲಿ 15 ಭಾರತೀಯ ಸಿಬ್ಬಂದಿ ಇದ್ದ ತೈಲ ಹಡಗೊಂದರ ಮೇಲೆ ದಾಳಿಯಾಗಿದೆ. ಆಗ್ನೇಯ ಏಷ್ಯನ್ ದೇಶವಾದ ಪಲಾವ್​ಗೆ ಸೇರಿದ ಆಯಿಲ್ ಟ್ಯಾಂಕರ್ ಓಮನ್​ ಮುಸಂದಮ್ ಬಳಿ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದಾಗ ಈ ದಾಳಿಯಾಗಿದೆ.

​ಪಲಾವ್ ದೇಶದ ಧ್ವಜವನ್ನು ಹೊಂದಿದ್ದ ‘ಸ್ಕೈಲೈಟ್’ ಹೆಸರಿನ ಈ ಆಯಿಲ್ ಟ್ಯಾಂಕರ್​ನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 15 ಮಂದಿ ಭಾರತೀಯರೇ ಇದ್ದರು. ಇನ್ನೈದು ಮಂದಿ ಇರಾನೀಯರೇ ಆಗಿದ್ದಾರೆ.ಆರಂಭಿಕ ಮಾಹಿತಿಯು ಹಡಗಿನ ಸಿಬ್ಬಂದಿಯ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಮುಸನ್​ಡಮ್​ನ ಖಸಬ್ ಪೋರ್ಟ್​ನಿಂದ ಐದು ನಾಟಿಕಲ್ ಮೈಲಿಯ ದೂರದಲ್ಲಿ ಈ ದಾಳಿಯಾಗಿದ್ದು, ಕೂಡಲೇ ಆ ಹಡಗು ಹಾಗೂ ಸಿಬ್ಬಂದಿಯನ್ನು ಓಮನ್ ಪಡೆಗಳು ರಕ್ಷಣೆ ಮಾಡಿದ್ದಾರೆ.

ಇತ್ತ ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ನಡೆಸಿದ ಪ್ರತೀಕಾರದ ದಾಳಿಯ ಅಲೆಯ ನಂತರ ಒಮಾನ್‌ನಲ್ಲಿ ಅಥವಾ ಅದರ ಸಮೀಪವಿರುವ ಗುರಿಗಳ ಮೇಲೆ ಮೊದಲ ಬಾರಿಗೆ ದಾಳಿ ನಡೆಸಲಾಗಿದೆ.

ಮುಸಂದಮ್‌ನ ಖಸಾಬ್ ಬಂದರಿನಿಂದ ಉತ್ತರಕ್ಕೆ ಸುಮಾರು 5 ನಾಟಿಕಲ್ ಮೈಲಿ(9.26 ಕಿಲೋಮೀಟರ್) ದೂರದಲ್ಲಿ ಈ ದಾಳಿ ನಡೆದಿದೆ ಎಂದು ಓಮನ್‌ನ ಕಡಲ ಭದ್ರತಾ ಕೇಂದ್ರವು ‘ಎಕ್ಸ್’ (X) ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ದಾಳಿಯ ನಂತರ ಹಡಗಿನಲ್ಲಿದ್ದ ಒಟ್ಟು 20 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಯಾವ ಶಸ್ತ್ರಾಸ್ತ್ರದಿಂದ ಈ ದಾಳಿ ನಡೆದಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !