ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್’ನ ಲುಧಿಯಾನದ ಖನ್ನಾ ಪ್ರದೇಶದ ಬಳಿಯ ಫ್ಲೈಓವರ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟವಾದ ಹೊಗೆ ಆಕಾಶಕ್ಕೆ ಹರಡಿದೆ.
ಖನ್ನಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಧನ ಟ್ಯಾಂಕ್’ಗೆ ಬೆಂಕಿ ಹೊತ್ತಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಇನ್ನು ತೈಲ ಟ್ಯಾಂಕರ್ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದೇ ಬೆಂಕಿಗೆ ಕಾರಣ ಎನ್ನಲಾಗ್ತಿದೆ. ಘಟನೆಯ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದು, ಫ್ಲೈಓವರ್ ಕೆಳಗೆ ವಾಹನಗಳು ಹಾದುಹೋಗುವಾಗ ಕಪ್ಪು ಹೊಗೆ ದಟ್ಟತೆಯನ್ನ ತೋರಿಸುತ್ತದೆ.
ಸದ್ಯದ ಮಾಹಿತಿ ಪ್ರಕಾರ, ಯಾವುದೇ ಸಾವುನೋವುಗಳು ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ.