August 29, 2026
Saturday, August 29, 2026
spot_img

ಹುಬ್ಬಳ್ಳಿಯ ಮರ್ಡ*ರ್‌ ಕೇಸ್: ಮೃತನ ಗುರುತು ಪತ್ತೆ, ಮೂವರ ವಿರುದ್ಧ ದೂರು

ಹೊಸದಿಗಂತ ವರದಿ ಹುಬ್ಬಳ್ಳಿ:

ವಿದ್ಯಾನಗರ ಸಿದ್ದೇಶ್ವರ ಪಾಕ್೯ ಬನಶಂಕರಿ ಬಡವಾಣೆ ಹತ್ತಿರ ವ್ಯಕ್ತಿಯೋರ್ವನನ್ನು ಇಬ್ಬರು ತಲಾವಾರ ನಿಂದ ಹೊಡೆ ಭೀಕರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದು ಇದೀಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ದೂರು ದಾಖಲಾಗಿದೆ.

ಮೃತನನ್ನು ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್‌ ಬಳಿ ದಾದಾಪೀರ ಉದೆಯಕರ (35) ಎಂದು ಗುರುತಿಸಲಾಗಿದೆ.

ಮೃತರ ಸಹೋದರ ಮೊಹಮ್ಮದ್ ಸಾಧಿಕ್ ಉದೆಯಕರ ವೀರೇಂದ್ರ ತಳಕಲ್, ದೀಪಕ ಚಲವಾದಿ ಸೇರಿ ಮೂವರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

2015ರಲ್ಲಿ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಲ ರಸ್ತೆ ಈಶ್ವರನಗರದ ಬಳಿ ನಡೆದ ಮಾರುತಿ ತಳಕಲ್ ಕೊಲೆ ಪ್ರಕರಣದಲ್ಲಿ ದಾದಾಪೀರ ಭಾಗಿಯಾಗಿದ್ದಾನೆ. ಇದೇ ದ್ವೇಷದಿಂದ ಮಾರುತಿ ಸಂಬಂಧಿಕರಾದ ವೀರೇಂದ್ರ ಮಟ್ಟಿ, ದೀಪಕ ಚಲವಾದಿ ಹಾಗೂ ಇತರರು ದಾದಾಪೀರನಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ.28ರಂದು ಸಂಚು ರೂಪಿಸಿ ಲಿಂಗರಾಜನಗರದ ಸಿದ್ದೇಶ್ವರ ಪಾರ್ಕ್‌ ಬಳಿ ಸಹೋದರ ದಾದಾಪೀರನನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ತಲ್ವಾರ್‌ನಿಂದ ಮುಖದ ಭಾಗಕ್ಕೆ ಹೊಡೆದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮೊಹಮ್ಮದ್ ಸಾಧಿಕ್ ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಎಸಿಪಿ ಶಿವಾನಂದ ಚಲವಾದಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !