ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದ ವಿಚಾರ ಸಂಬಂಧ, ರಾಜ್ಯದಲ್ಲಿ ಕೇಸ್ ವಾಪಸ್ ಪಡೆಯುವ ಅಧಿಕಾರ ಸೆಕ್ಷನ್ 321ರ ಅನ್ವಯ ಎಲ್ಲಾ ಸರ್ಕಾರಗಳಿಗೂ ಅಧಿಕಾರವಿದೆ. ಸಹಜವಾಗಿ ಸಾರ್ವಜನಿಕ ಸಂಸ್ಥೆಗಳು ಗೃಹ ಇಲಾಖೆಗಳಿಗೆ ಮನವಿಯನ್ನ ಸಲ್ಲಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಅನೇಕ ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ಅಮಾಯಕರ ಮೇಲೆ ಕೇಸ್‌ಗಳನ್ನ ದಾಖಲಿಸಿರುತ್ತಾರೆ. ರೈತರ ಚಳವಳಿಯಲ್ಲಿ ಅನೇಕ ಮಂದಿ ಭಾಗಿಯಾಗಿರುತ್ತಾರೆ. ಪ್ರಾಂತ್ಯ, ಭಾಷಾ, ನೀರಿಗಾಗಿ ಹೋರಾಟ ಮಾಡಿದವ್ರು ಇದ್ದಾರೆ. ಕೆಲವೊಂದು ಚಳವಳಿಗಳು ಸಹ ನಡೆದಿವೆ. ಆಗ ಅವರು ಕೇಸ್ ವಾಪಾಸ್ ತೆಗೆದುಕೊಳ್ಳಿ ಅಂತಾ ಮನವಿ ಮಾಡ್ತಾರೆ. ನಾವು ಹೋರಾಟ ಮಾಡಿದ್ದು ರಾಜ್ಯದ ಹಿತಕ್ಕಾಗಿ ಎಂದು ಮನವಿ ಮಾಡುತ್ತಾರೆ. ಆಗ ಸರ್ಕಾರ ಕೇಸ್ ತೆಗೆದುಕೊಳ್ಳುತ್ತದೆ ಇದು ಬಹಳ ಹಿಂದಿನಿಂದಲೂ ಎಲ್ಲ ಸರ್ಕಾರಗಳು ಮಾಡುತ್ತ ಬಂದಿದೆ. ಅದೇ ರೀತಿ ನಮ್ಮ ಸರ್ಕಾರವೂ ಸಹ ಕೇಸ್ ವಾಪಸ್ ತೆಗೆದುಕೊಂಡಿದೆ ಎಂದರು.
ಹುಬ್ಬಳ್ಳಿ ಗಲಭೆಯಲ್ಲಿ ಸುಮಾರು 43 ಕೇಸ್ ಗಳನ್ನು ವಾಪಸ್ ಪಡೆಯಲಾಗಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿದಾಗ ಸುಮಾರು 381 ಕೇಸ್‌ಗಳನ್ನ ವಾಪಸ್ ಪಡೆಯಲಾಗಿತ್ತು. ಅದರಲ್ಲಿ 183 ಕೇಸ್ ಪೊಲೀಸ್ ನೈತಿಕ ಗಿರಿ, ಹಿಜಾಬ್ ಪ್ರಕರಣ ಆಗಿದೆ. ಒಟ್ಟು ಎರಡು ಸಾವಿರ ಆರೋಪಿಗಳನ್ನ ಇವರು ವಿಥ್ ಡ್ರಾ ಮಾಡಿಕೊಂಡಿದ್ದಾರೆ. 2020ರಲ್ಲಿ 67 ಪ್ರಕರಣಗಳನ್ನ ವಿತ್ ಡ್ರಾ ಮಾಡಿದ್ದಾರೆ. ಅದನ್ನ ಜೆ ಸಿ ಮಾಧುಸ್ವಾಮಿ ಡಿಫೆಂಡ್ ಮಾಡಿಕೊಳ್ತಾರೆ, ಸಿಟಿ.ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಹಾಲಪ್ಪ ಅವರು ಇವರೆಲ್ಲಾ ಆ ಕೇಸ್ ಅಲ್ಲಿದ್ದು ಕೇಸ್‌ಗಳನ್ನ ವಿತ್ ಡ್ರಾ ಮಾಡಿಕೊಂಡಿದ್ದಾರೆ. ಇದೀಗ ರಾಜ್ಯ ಸರ್ಕಾರ ಕೇಸ್ ವಾಪಸ್ ಪಡೆದ ಬಗ್ಗೆ ಮಾತನಾಡ್ತಾರೆ ಕಿಡಿಕಾರಿದರು.
ನಮ್ಮ ರಾಜ್ಯದಲ್ಲಿರುವ ಬಲಪಂಥಿಯರು ಯಾರಿದ್ದಾರೆ, ಶ್ರೀರಾಮಸೇನೆ ಭಜರಂಗದಳ ಹಾಗೂ ಬಿಜೆಪಿಯ ಬಹುತೇಕ ಕಾರ್ಯಕರ್ತರು 2018 ರಿಂದ 2020 ರವರೆಗೆ 128 ಕೇಸ್‌ಗಳನ್ನ ಹಿಂದಿನ ಬಿಜೆಪಿ ಸರ್ಕಾರ ಕೇಸ್ ವಿತ್ ಡ್ರಾ ಮಾಡಿದೆ. ಬಿಜೆಪಿ ಅವಧಿಯಲ್ಲಿ ಪೊಲೀಸರ ಮೇಲೆ ದೊಂಬಿ ಮಾಡಲಾಗಿತ್ತು. ಎಸ್‌ಡಿಪಿಐ, ಪಿಎಫ್‌ಐ ಕೇಸ್ ವಾಪಸ್ ಪಡೆದಿದ್ರು. ಬಿಜೆಪಿಯವರು ಹುಡುಕಿ ಹುಡುಕಿ ಅವರ ಮೇಲೆ ಕೇಸ್ ಹಾಕ್ತಿದ್ರು. ಅತ್ಯಾಚಾರ ಮಾಡಿ ಜೈಲಿಂದ ಹೊರಗೆ ಬಂದವರಿಗೆ ಬಿಜೆಪಿ ಸನ್ಮಾನ ಮಾಡಿತು. ನಮ್ಮ ಬಗ್ಗೆ ಮಾತನಾಡೋಕೆ ಅವರಿಗೆ ನೈತಿಕತೆ ಇದ್ಯಾ? ಅವರಿಗೆ ದೇಶದ ಬಗ್ಗೆ ಭಕ್ತಿ ಇಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡ್ತಾರೆ. ಎಸ್‌ಡಿಪಿಐ, ಪಿಎಫ್‌ಐ ಕೇಸ್ ಯಾಕೆ ವಾಪಸ್ ಪಡೆದ್ರು? ಯಾವ ಕಾರಣಕ್ಕೆ ಬಿಜೆಪಿ ವಾಪಸ್ ಪಡೆಯಿತು ಉತ್ತರಿಸಲಿ ಎಂದು ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು.