ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋತಿಗಳಿಗೆ ಹೆದರಿ ವೃದ್ಧೆಯೊಬ್ಬರು ಬಾವಿಗೆ ಹಾರಿದ ಘಟನೆ ತೆಲಂಗಾಣದ ರಾಜಣ್ಣಸಿರಿಸಿಲ್ಲ ಜಿಲ್ಲೆಯಲ್ಲಿ ನಡೆದಿದೆ. ವೃದ್ಧೆ ಕಿರುಚಾಟದ ಸದ್ದು ಕೇಳಿ ಸ್ಥಳೀಯ ಯುವಕರು ಕೂಡಲೇ ಬಾವಿಗೆ ಹಗ್ಗ ಹಾಕಿ ಆಕೆಯನ್ನು ರಕ್ಷಿಸಿದ್ದಾರೆ.
ಎಲ್ಲರೆಡ್ಡಿ ಮಂಡಲದ ಭೋಪ್ಪಾಪುರ ಗ್ರಾಮದ ವೃದ್ಧೆ ರಾಜವ್ವ ಶನಿವಾರ ಮನೆಯಿಂದ ಹೊರ ಹೋಗಿದ್ದರು. ಈ ಸಮಯದಲ್ಲಿ ಕೋತಿಗಳು ಅಜ್ಜಿಯನ್ನು ಓಡಿಸಿಕೊಂಡು ಬಂದಿದ್ದು, ಭಯದಿಂದ ವೃದ್ಧೆ ಬಾವಿಗೆ ಹಾರಿದ್ದಾರೆ. ಬಂಡೆಯ ಸಹಾಯ ಪಡೆದು ಜೋರಾಗಿ ಕೂಗಿಕೊಂಡರು.
ಅಲ್ಲಿದ್ದ ಯುವಕ ಕೂಗಾಟದ ಶಬ್ದ ಕೇಳಿ ಬಾವಿಗೆ ಇಳಿದು ಆಕೆಯ ಸೊಂಟಕ್ಕೆ ಹಗ್ಗ ಬಿಗಿದಿದ್ದಾನೆ. ಬಳಿಕ ಸ್ಥಳೀಯರ ಸಹಾಯದಿಂದ ಬಾವಿಯಿಂದ ವೃದ್ಧೆಯನ್ನು ಸುರಕ್ಷಿತವಾಗಿ ಆಚೆ ಕರೆತರಲಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.