ಅಜ್ಜಿ ಈ ವಯಸ್ಸಲ್ಲಿ ಇದೆಲ್ಲಾ ಬೇಕಾ? ವಿಶ್ವದಾಖಲೆಗಾಗಿ ಈ ವೃದ್ಧೆ ಮಾಡಿದ ಸಾಹಸವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳು ವೈರಲ್ ಆಗುತ್ತಿವೆ.. ನಿನ್ನೆ ಒಬ್ಬ ವ್ಯಕ್ತಿ ಹಗ್ಗದ ಮೇಲೆ ತುಂಬಾ ಎತ್ತರದಲ್ಲಿ ನಡೆದು ಗಿನ್ನಿಸ್‌ ದಾಖಲೆ ಬರೆದರೆ, ಇವತ್ತು ವೃದ್ಧೆಯೊಬ್ಬರು ವಿಶ್ವ ದಾಖಲೆಗಾಗಿ ದೊಡ್ಡ ಸಾಹಸ ಮಾಡಿದ್ದಾರೆ.ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಯಸ್ಸನ್ನು ತಮ್ಮ ದಾರಿಯಲ್ಲಿ ನಿಲ್ಲಲು ಬಿಡದ ಸ್ಪೂರ್ತಿದಾಯಕ ಜನರಲ್ಲಿ ಡೊರೊಥಿ ಒಬ್ಬರು. ಈ 104 ವರ್ಷದ ಮಹಿಳೆ ಸ್ಕೈಡೈವಿಂಗ್ ವಿಶ್ವದಾಖಲೆ ಮಾಡಲು ಪ್ರಯತ್ನಿಸಿದರು. ಆಕೆಯ ಸಾಹಸದ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ, ಈಕೆಯ ಸಾಹಸವನ್ನು ಕಂಡು ಜನ ಮೂಕವಿಸ್ಮಿತರಾಗಿದ್ದಾರೆ. ಡೊರೊಥಿ ಈ ಸಾಧನೆ ಮಾಡಲು ಸಹಾಯ ಮಾಡಿದ ಸಂಸ್ಥೆ ಸ್ಕೈಡೈವ್ ಚಿಕಾಗೋ.

ಈ ವಯಸ್ಸಿನಲ್ಲಿ ಸರಿಯಾಗಿ ನಡೆಯಲು ಜನ ಹೆದರುತ್ತಾರೆ.. ಆದರೆ ವೃದ್ಧೆಯ ಧೈರ್ಯ ಮತ್ತು ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಹಸ ಮೂಲಕ ಡೊರೊಥಿ ದಾಖಲೆ ನಿರ್ಮಿಸಿದ್ದಾರೆಯೇ ಎಂಬುದನ್ನು ಗಿನ್ನೆಸ್ ವಿಶ್ವ ದಾಖಲೆಗಳು ಇನ್ನೂ ಖಚಿತಪಡಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!