ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯಲ್ಲಿ ಡಿಸಿ ಮತ್ತು ಎಸ್‌ಪಿ ದಕ್ಷರು. ಬರೇ ದಕ್ಷರಾದರೆ ಪ್ರಯೋಜನ ಆಗದು. ಸಮಯ ಸಂದರ್ಭ ನೋಡಿಕೊಂಡು ತಮ್ಮ ಬಳಿ ಇರುವ ಕೋವಿ ಮತ್ತು ಕೋಲಿಗೆ ಪೊಲೀಸರು ಕೆಲಸ ಕೊಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಒತ್ತಾಯಿಸಿದರು.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಹಾಗೂ ಕಾಂಗ್ರೆಸ್‌ನ ಹಿಂದೂ ವಿರೋ ನೀತಿ ವಿರೋಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿ‘ಟನಾ ಸಭೆಯಲ್ಲಿ ಮಾತನಾಡಿದರು.
1971 ಐಪಿಸಿ ಸೆಕ್ಷನ್ 296, 297 ಇವು ದೇಶದ ಭೂಪಟವನ್ನು ವಿರೂಪ ಮಾಡಿದರೆ ಕೇಸ್ ದಾಖಲಿಸಲು ಹೇಳುತ್ತದೆ. ಆದರೆ ಇಲ್ಲಿನ ಎಸ್‌ಪಿ ಕೇಸ್ ಮತ್ತು ಕೌಂಟರ್ ಕೇಸ್ ಮಾಡಿ ಕುಳಿತುಕೊಂಡಿದ್ದಾರೆ. ಇದನ್ನು ಮಾಡಲು ನೀವೇ ಬೇಕಾ? ಇದನ್ನು ಒಬ್ಬ ದಕ್ಷ ಅಧಿಕಾರಿ, ಎಎಸ್‌ಐ ಕೂಡ ಮಾಡಬಲ್ಲ ಎಂದು ತಿವಿದರು.
ನಮ್ಮ ಸರ್ಕಾರದ ಅವಧಿಯಲ್ಲೂ ಡಿಜೆ ಹಳ್ಳಿ-ಕೆಜೆ ಹಳ್ಳಿ, ಪ್ರವೀಣ್ ನೆಟ್ಟಾರು, ಹರ್ಷ ಹತ್ಯೆ ನಡೆದವು. ಆಗಲೇ ನಾವು ಕೋವಿ-ಕೋಲಿಗೆ ಕೆಲಸ ಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ಅವಯಲ್ಲೂ ತಪ್ಪಾಗಿದೆ ಎಂದರು.